ಶಾಸಕ ಯು.ಟಿ.ಖಾದರ್ ಕಾರು ಹಿಂಬಾಲಿಸಿದ ಪ್ರಕರಣದ ಸೂಕ್ತ ತನಿಖೆಯಾಗಲಿ: ಎಸ್‍ಡಿಪಿಐ

Update: 2020-12-25 17:10 GMT

ಬೆಂಗಳೂರು, ಡಿ.25: ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ.ಖಾದರ್ ಅವರನ್ನು ಪೂಜಾರಿ ಎಂಬಾತ ಬೈಕ್‍ನಲ್ಲಿ ಬೆನ್ನಟ್ಟಿದ ಪ್ರಕರಣದ ನಿಷ್ಪಕ್ಷ ತನಿಖೆಯಾಗಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಆಗ್ರಹಿಸಿದ್ದಾರೆ.

ಹಲವು ಪ್ರಕರಣಗಳ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಶಾಸಕರನ್ನು ಹಿಂಬಾಲಿಸಿರುವುದು ಹಲವು ಆಯಾಮಗಳಲ್ಲಿ ಸಂಶಯಾಸ್ಪದವಾಗಿದೆ. ಪೊಲೀಸರು ಆತನ ವಿರುದ್ಧ ಸ್ವಯಂಪ್ರೇರಿತ ಕೇಸು ಹಾಕಬೇಕು. ನೈಜ ಅಪರಾಧಿಯನ್ನು ಹಿಡಿದ ಪೊಲೀಸರಿಗೆ ಎಸ್.ಡಿ.ಪಿ.ಐ ಅಭಿನಂದಿಸಿರುವುದಲ್ಲದೆ, ರಾಜಕೀಯ, ಸಾಮಾಜಿಕ ಮುಖಂಡರಿಗೆ ಸರಕಾರ ಸೂಕ್ತ ಭದ್ರತೆ ನೀಡಬೇಕು. ಈ ಬಗ್ಗೆ ಗುಪ್ತಚರ ಇಲಾಖೆ ಸದಾ ಮಾಹಿತಿ ಸಂಗ್ರಹಿಸಿರಬೇಕು. ಕರ್ನಾಟಕದಲ್ಲಿ ಹಿಂಸಾ ರಾಜಕೀಯಕ್ಕೆ ಅವಕಾಶವಿಲ್ಲ ಎಲ್ಲ ಪಕ್ಷದವರು ಪರಸ್ಪರ ಪ್ರೀತಿ ವಿಶ್ವಾಸ ವೃದ್ಧಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News