ಟೋಪಿ ಹಾಕುವ ಸ್ಕೀಂಗಳಿಗೂ ಪಿಎಂ-ಕೇರ್ಸ್‍ಗೂ ವ್ಯತ್ಯಾಸವಿದೆಯೇ?: ದಿನೇಶ್ ಗುಂಡೂರಾವ್

Update: 2020-12-26 13:42 GMT

ಬೆಂಗಳೂರು, ಡಿ.26: "ಪಿಎಂ-ಕೇರ್ಸ್ ಎಂಬ ನಿಧಿ ಸ್ಥಾಪಿಸಿ ಸ್ವತಃ ಕೇಂದ್ರ ಸರಕಾರವೇ ಆರ್ಥಿಕ ಅಪರಾಧದಲ್ಲಿ ತೊಡಗಿದೆ. ದೇಶದಲ್ಲಿ ನಡೆಯುವ ಅನೇಕ ಟೋಪಿ ಹಾಕುವ ಸ್ಕೀಂಗಳಿಗೂ ಈ ಪಿಎಂ-ಕೇರ್ಸ್‍ಗೂ ಏನಾದರೂ ವ್ಯತ್ಯಾಸವಿದೆಯೆ? ಕೋವಿಡ್ ಸಂಕಷ್ಟ ಕಾಲದಲ್ಲಿ ಜನರಿಗೆ ನೆರವಾಗಬೇಕಾದ ಸರಕಾರ, ಜನರಿಂದಲೇ ದೇಣಿಗೆ ಪಡೆದು, ಬಿಡಿಗಾಸು ಖರ್ಚು ಮಾಡದೆ ಮಾಹಿತಿ ಮುಚ್ಚಿಟ್ಟರೆ ಏನರ್ಥ?" ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ರೈತರ ಪ್ರತಿಭಟನೆ ವಿಚಾರದಲ್ಲಿ ಕೇಂದ್ರ ಸರಕಾರ ಲಜ್ಜೆಗೇಡಿತನ ಪ್ರದರ್ಶಿಸುತ್ತಿದೆ. ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಾಗುತ್ತಿದ್ದರೂ ಮೋದಿ ಸರಕಾರದ ನಿರ್ಲಿಪ್ತತೆ ಖಂಡನೀಯ. ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದ್ದರೂ ಕೇಂದ್ರ ಸ್ಪಂದಿಸದೇ ಹೋದರೆ, ಇದು ದಪ್ಪ ಚರ್ಮದ ಸರಕಾರವಲ್ಲದೆ ಮತ್ತೇನು? ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News