ಕೆಎಸ್ಸಾರ್ಟಿಸಿ ಸಹಾಯವಾಣಿ ಸಂಖ್ಯೆ ಬದಲು
Update: 2020-12-26 19:55 IST
ಬೆಂಗಳೂರು, ಡಿ. 26: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಸಾರ್ವಜನಿಕರ ಪ್ರಯಾಣ ಸುಗಮಗೊಳಿಸುವ ಉದ್ದೇಶದಿಂದ ಒದಗಿಸಿರುವ ಕಾಲ್ ಸೆಂಟರ್ ಸಹಾಯವಾಣಿ ಸಂಖ್ಯೆ-94495 96666 ಅನ್ನು ಬದಲಾಯಿಸಿ, ನೂತನ ಸಹಾಯವಾಣಿ ಸಂಖ್ಯೆ 080-2625 2625 ಅನ್ನು 2021ರ ಜನವರಿ 1ರಿಂದ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ಸಾರ್ವಜನಿಕ ಪ್ರಯಾಣಿಕರು ಸಲಹೆ/ದೂರುಗಳು ಹಾಗೂ ಇನ್ನಿತರೆ ಸಂಸ್ಥೆಯ ವಿಚಾರಣೆ/ಮಾಹಿತಿಗಾಗಿ ಕಾಲ್ ಸೆಂಟರ್ ಸಹಾಯವಾಣಿ ಸಂಖ್ಯೆ 080-2625 2625ಗೆ ಸಂಪರ್ಕಿಸಲು ಕೆಎಸ್ಸಾರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಅಧಿಕೃತ ಪ್ರಕಟಣೆಯಲ್ಲಿ ಕೋರಿದ್ದಾರೆ.