ರಾಜ್ಯದಲ್ಲಿಂದು 857 ಕೊರೋನ ಪ್ರಕರಣಗಳು ದೃಢ; 7 ಮಂದಿ ಸಾವು
ಬೆಂಗಳೂರು, ಡಿ.26: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಗೊಂಡಿರುವ ಹಿನ್ನೆಲೆಯಲ್ಲಿ ಶನಿವಾರ ಸೋಂಕಿತರ ಸಂಖ್ಯೆ ಮೂರಂಕಿಗೆ ಇಳಿದಿದ್ದು, 857 ಹೊಸ ಪ್ರಕರಣಗಳು ವರದಿಯಾಗಿದ್ದರೆ, ಸೋಂಕಿನಿಂದ ಏಳು ಜನರಷ್ಟೇ ಮೃತಪಟ್ಟಿದ್ದಾರೆ.
ಕರ್ನಾಟಕದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 9,15,345 ಕ್ಕೆ ಏರಿಕೆಯಾಗಿದ್ದು, 205 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 12,051 ಕ್ಕೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಒಟ್ಟಾರೆ 8,89,881 ಜನರು ವಿವಿಧ ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅಲ್ಲದೆ, ಇನ್ನೂ 1,3,394 ಸಕ್ರಿಯ ಪ್ರಕರಣಗಳಿದ್ದು, ಇವರೆಲ್ಲರೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ.
7 ಮಂದಿ ಬಲಿ: ಬೆಂಗಳೂರು ನಗರ-4, ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಹಾಗೂ ಕಲಬುರಗಿಯಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ.
ಸೋಂಕಿತರ ವಿವರ: ಬಾಗಲಕೋಟೆ 2, ಬಳ್ಳಾರಿ, 7, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 471, ಬೀದರ್ 7, ಚಾಮರಾಜನಗರ 10, ಚಿಕ್ಕಬಳ್ಳಾಪುರ 25, ಚಿಕ್ಕಮಗಳೂರು 9, ಚಿತ್ರದುರ್ಗ 9, ದಕ್ಷಿಣ ಕನ್ನಡ 34, ದಾವಣಗೆರೆ 14, ಧಾರವಾಡ 6, ಗದಗ 6, ಹಾಸನ 16, ಹಾವೇರಿ 1, ಕಲಬುರಗಿ 14, ಕೊಡಗು 14, ಕೋಲಾರ 8, ಕೊಪ್ಪಳ 5, ಮಂಡ್ಯ 17, ಮೈಸೂರು 62, ರಾಯಚೂರು 2, ರಾಮನಗರ 2, ಶಿವಮೊಗ್ಗ 31, ತುಮಕೂರು 32, ಉಡುಪಿ 3, ಉತ್ತರ ಕನ್ನಡ 13, ವಿಜಯಪುರ 12 ಹೊಸ ಪ್ರಕರಣಗಳುವರದಿಯಾಗಿವೆ ಎಂದು ಇಲಾಖೆ ಮಾಹಿತಿ ನೀಡಿದೆ.
ರಾಜಧಾನಿಯಲ್ಲಿ 471 ಸೋಂಕಿತರು ಪತ್ತೆ: ಸಿಲಿಕಾನ್ ಸಿಟಿಯಲ್ಲಿ ನಿರಂತರವಾಗಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಶನಿವಾರ 471 ಹೊಸ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಬ್ರಿಟನ್‍ನಲ್ಲಿ ಹೊಸ ಕೊರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಹಲವು ಜನರಿಗೆ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೆ, ಶನಿವಾರ ಸೋಂಕಿಗೆ ಕೇವಲ ನಾಲ್ಕು ಜನರಷ್ಟೇ ಬಲಿಯಾಗಿದ್ದಾರೆ.
ನಗರದಲ್ಲಿ ಇದುವರೆಗೂ 3,80,657 ಕೊರೋನ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 3,72,970 ಜನರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, 8795 ಸಕ್ರಿಯ ಪ್ರಕರಣಗಳಿವೆ. ರಾಜಧಾನಿಯಲ್ಲಿ ಇದುವರೆಗೂ 4291 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನೂ, 97 ಜನರು ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.