ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‍ಗೆ ಎಫ್.ಎಂ.ಸಿ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳು ಆಯ್ಕೆ

Update: 2020-12-26 18:05 GMT

ಮಡಿಕೇರಿ: ಜನವರಿ 26, 2021 ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಪಥಸಂಚನದಲ್ಲಿ ಪಾಲ್ಗೊಳ್ಳಲು ಕೊಡಗು ಜಿಲ್ಲೆಯ ಎನ್‍ಸಿಸಿ ಸೀನಿಯರ್ ವಿಭಾಗದಿಂದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಇಬ್ಬರು ಕೆಡೆಟ್ ಗಳಾದ ಇಂದ್ರಜಿತ್ ಎಂ.ಎಸ್ ಮತ್ತು ಯಶಸ್ವಿ. ಸಿ.ಟಿ ಅವರು ಕಾಲೇಜಿನ ಎನ್‍ಸಿಸಿ ಅಧಿಕಾರಿಯಾದ ಮೇಜರ್ ಡಾ. ರಾಘವ್ ಬಿ ಹಾಗೂ 19ನೇ ಕರ್ನಾಟಕ ಬೆಟಾಲಿಯನ್‍ನ’ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆಯ್ಕೆಯಾಗಿರುತ್ತಾರೆ. ಇವರು ಕರ್ನಾಟಕ-ಗೋವಾ ಡೈರೆಕ್ಟರೇಟ್ ನ್ನು ಪ್ರತಿನಿಧಿಸಿದ 26 ಕೆಡೆಟ್ ಗಳ ಪೈಕಿ ಕೇವಲ ಇಬ್ಬರಾಗಿದ್ದು, ಕೊಡಗಿನ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ. 

ದ್ವಿತೀಯ ಬಿ.ಬಿ.ಎ ವಿದ್ಯಾರ್ಥಿಯಾದ ಇಂದ್ರಜಿತ್ ಎಂ.ಎಸ್ ಇವರು ತಾಳತ್‍ಮನೆಯ ನಿವಾಸಿಯಾದ ಸುಬ್ರಮಣಿ.ಎಂ.ಜಿ ಮತ್ತು ಸುಜಾತ ಎಂ.ಎಸ್ ಇವರ ಪುತ್ರರಾಗಿದ್ದಾರೆ. ದ್ವಿತೀಯ ಬಿಎಸ್‍ಸಿಯ ಯಶಸ್ವಿ. ಸಿ.ಟಿ ಇವರು ಪಾರಾಣೆ, ಕೊಣಂಜಗೇರಿ ನಿವಾಸಿಗಳಾದ ಚೌವ್ವಂಡ ಮನು ತಮ್ಮಯ್ಯ ಮತ್ತು ಸಮಿತ ಅವರ ಪುತ್ರಿಯಾಗಿರುತ್ತಾರೆ. 

ಹಲವಾರು ವರ್ಷಗಳಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಿಂದ ನಿರಂತರವಾಗಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕೆಡೆಟ್ ಗಳು ಆಯ್ಕೆಯಾಗುತ್ತಿರುವುದಲ್ಲದೆ, ಸೇನೆಯ ಉನ್ನತ ಹುದ್ದೆಗಳನ್ನೊಳಗೊಂಡು, ವಿವಿಧ ಸ್ಥಾನಗಳಿಗೆ ಆಯ್ಕೆಯಾಗುತ್ತಿರುವುದಕ್ಕೆ ಕಾಲೇಜಿನ ಅಧ್ಯಾಪಕ ಅಧ್ಯಾಪಕೇತರ ವೃಂದದವರು ಹರ್ಷ ವ್ಯಕ್ತಿಪಡಿಸಿದ್ದಾರೆ. 

ಇದೀಗ ಈ ಇಬ್ಬರು ಕೆಡೆಟ್‍ಗಳು ಅದರ ಸರದಿಯಲ್ಲಿರುವುದಕ್ಕೆ ಕಾಲೇಜಿನ ಎಲ್ಲರ ಪರವಾಗಿ ಪ್ರಾಂಶುಪಾಲರಾದ ಡಾ. ಚೌರೀರ ಜಗತ್ ತಿಮ್ಮಯ್ಯ ಅವರು ಅಭಿನಂದನೆ ಸಲ್ಲಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News