ನಂದಿ ಬೆಟ್ಟಕ್ಕೆ ಡಿ.30ರಿಂದ ಮೂರು ದಿನ ನಿರ್ಬಂಧ

Update: 2020-12-27 12:24 GMT

ಬೆಂಗಳೂರು, ಡಿ. 27: ರಾಜ್ಯಾದ್ಯಂತ ಎರಡನೇ ಹಂತದ ಕೊರೋನ ಸೋಂಕು ಹರಡುವ ಭೀತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ನಂದಿ ಬೆಟ್ಟದಲ್ಲಿ  ಡಿ.30 ಮೂರು ದಿನಗಳ ಕಾಲ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ಡಿ 30ರಿಂದ ಬೆಳಗ್ಗೆ ಆರು ಗಂಟೆಯಿಂದ ಜನವರಿ 2ರ ಬೆಳಗ್ಗೆ ಆರು ಗಂಟೆಯ ವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ. ನೂತನ ವರ್ಷಾಚರಣೆಗೆ ತಡೆ ಹಾಗೂ ಕೊರೋನ ಸೋಂಕು ಹರಡುವುದನ್ನು ತಡೆಗಟ್ಟಲು ಜನರು ಗುಂಪಾಗಿ ಸೇರುವುದನ್ನು ನಿರ್ಬಂಧಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಹೊಸ ವರ್ಷದ ಸಂದರ್ಭದಲ್ಲಿ ನಂದಿಗೆ ಹಲವು ಪ್ರವಾಸಿಗರು ಭೇಟಿ ನೀಡುತ್ತಾರೆ. ಜನದಟ್ಟಣೆ ಅಧಿಕವಾಗಿರುವುದರಿಂದ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿವರ್ಷ ಡಿ.31ರ ಸಂಜೆ 5 ಗಂಟೆಯ ಬಳಿಕ ನಂದಿಬೆಟ್ಟಕ್ಕೆ ಪ್ರವೇಶ ಬಂದ್ ಮಾಡಿ ಜ. 1ರ ಬೆಳಗ್ಗೆ 8 ಗಂಟೆಯ ನಂತರ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಮೂರು ದಿನಗಳ ಕಾಲ ನಂದಿಬೆಟ್ಟ ಪ್ರವಾಸಿ ತಾಣಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News