×
Ad

ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

Update: 2020-12-27 20:08 IST

ಮಡಿಕೇರಿ,ಡಿ.27 : ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ದಕ್ಷಿಣ ಕೊಡಗಿನ ಹೈಸೊಡ್ಲೂರು ಗ್ರಾಮದಲ್ಲಿ ನಡೆದಿದೆ. ಮಂಡೇಂಗಡ ಬೋಪಣ್ಣ (18) ಹಾಗೂ ಮೋನಿಶ್(18) ಮೃತಪಟ್ಟವರು.  

ರಜಾದಿನವಾದ ಕಾರಣ ಕೀರೆಹೊಳೆಯಲ್ಲಿ ಈಜುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಬೋಪಣ್ಣ ಅವರನ್ನು ರಕ್ಷಣೆ ಮಾಡಲು ಸ್ಥಳೀಯ ತೋಟದ ಕಾರ್ಮಿಕರು ಪ್ರಯತ್ನಿಸಿದರಾದರೂ ಸಫಲರಾಗಲಿಲ್ಲ.

ಸ್ಥಳಕೆ ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News