ಓ ಮೆಣಸೇ...

Update: 2020-12-27 19:30 GMT

ಮಾಜಿ ಪ್ರಧಾನಿ ದೇವೇಗೌಡರ ಆಲೋಚನೆಗಳು ಇಂದಿನ ರಾಜಕೀಯದಲ್ಲಿ ನಡೆಯುವುದಿಲ್ಲ- ಬಸವರಾಜ್ ಹೊರಟ್ಟಿ, ವಿ.ಪ.ಸದಸ್ಯ
ಕುಮಾರಸ್ವಾಮಿಯವರ ದುರಾಲೋಚನೆಗಳಿಂದ ರಾಜಕೀಯ ಓಡುತ್ತಿರುವುದು ಎಂದು ಹೇಳುತ್ತಿದ್ದಾರೆ.


ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣೆ ಹೊತ್ತಿಗೆ ಮಮತಾ ಬ್ಯಾನರ್ಜಿ ಏಕಾಂಗಿಯಾಗಿರುತ್ತಾರೆ - ಅಮಿತ್ ಶಾ, ಕೇಂದ್ರ ಸಚಿವ
ಏಕಾಂಗಿಯಾಗಿ ಸರಕಾರ ರಚನೆ ಮಾಡುವಷ್ಟು ಬೆಂಬಲ ಪಡೆಯುತ್ತಾರೆ ಎಂದು ಕಾಣುತ್ತದೆ.


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮನಹಳ್ಳಿ ಮುದುಕಿಯಂತೆ ವರ್ತಿಸುತ್ತಿದ್ದಾರೆ- ಎಚ್.ವಿಶ್ವನಾಥ್, ವಿ.ಪ. ಸದಸ್ಯ
ಮುದುಕರಿಗೆ ಮುದುಕಿಯರ ನೆನಪಾಗುವುದು ಸಹಜ.


ಮುಸ್ಲಿಮರು ಗೋಮಾಂಸ ತಿನ್ನಬೇಡಿ ಎಂದು ಕೈ ಮುಗಿದು ಬೇಡಿಕೊಳ್ಳುತ್ತೇನೆ - ಸಿ.ಎಂ. ಇಬ್ರಾಹೀಂ, ವಿ.ಪ. ಸದಸ್ಯ
ಈ ಹೇಳಿಕೆ ನೀಡಲು ಬಿಜೆಪಿಯವರು ನಿಮಗೆ ತಿನ್ನಿಸಿದ ಮಾಂಸ ಯಾವುದು?


ಸಂವಿಧಾನ ಬಲ್ಲವರು ಗೋಹತ್ಯೆ ನಿಷೇಧ ವಿರೋಧಿಸರು - ಸಿ.ಟಿ.ರವಿ, ಮಾಜಿ ಸಚಿವ
ಕಾರು ಹರಿಸಿ ಮನುಷ್ಯರ ಹತ್ಯೆ ಮಾಡಿದವರಿಗೆ ಸಂವಿಧಾನದ ಬಗ್ಗೆ ಮಾಹಿತಿಯಿದೆಯೇ?


ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕೃಷಿ ಕಾಯ್ದೆಯನ್ನು ವಾಪಸ್ ಪಡೆದರೆ ನಾಳೆ ಎಲ್ಲ ಕಾಯ್ದೆಗಳಿಗೂ ಇದೇ ಸಮಸ್ಯೆ ಎದುರಾಗಬಹುದು - ರಾಮದಾಸ್ ಅಠಾವಳೆ, ಕೇಂದ್ರ ಸಚಿವ
ಎಲ್ಲ ಕಾಯ್ದೆಗಳೂ ಜನವಿರೋಧಿ ಎನ್ನುವುದು ನಿಮಗೆ ಗೊತ್ತಿದೆ ಎಂದಾಯಿತು.


ಮಾದಿಗ ಸಮುದಾಯದಲ್ಲೂ ಋಷಿ ಮುನಿಗಳಿದ್ದರು ಎಂಬುದಕ್ಕೆ ಸಾಕ್ಷ ವೇದಗಳಲ್ಲಿದೆ-ಸಿದ್ದಲಿಂಗಯ್ಯ, ದಲಿತ ಕವಿ
ಸದ್ಯಕ್ಕೆ ಸಂವಿಧಾನವೆನ್ನುವ ವೇದದ ಬಗ್ಗೆ ಜ್ಞಾನ ಬೆಳೆಸಿಕೊಳ್ಳಿ.


ಸ್ವಾತಂತ್ರ ಬಂದ ನಂತರ ಆಡಳಿತ ನಡೆಸಿದ ಸರಕಾರಗಳು ರೈತ ವಿರೋಧಿ ಕಾಯ್ದೆಗಳಿಗೆ ತಿದ್ದುಪಡಿ ಮಾಡದಿರುವುದು ನಾಚಿಕೆಗೇಡಿನ ಸಂಗತಿ -ತೇಜಸ್ವಿ ಸೂರ್ಯ, ಸಂಸದ
ಅದಕ್ಕಾಗಿ ರೈತರನ್ನೇ ವಿರೋಧಿಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವುದೇ?


ಬಿಜೆಪಿ-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖವಲ್ಲ - ಯಡಿಯೂರಪ್ಪ, ಮುಖ್ಯಮಂತ್ರಿ
ಜೆಡಿಎಸ್‌ಗೆ ಮುಖವೇ ಇಲ್ಲ ಎನ್ನುವ ಕಾರಣಕ್ಕಿರಬಹುದು.


ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಸೋಲಲು ನಮ್ಮ ಪಕ್ಷದ ಮುಖಂಡರೇ ಕಾರಣ - ಎಸ್.ಆರ್.ಶ್ರೀನಿವಾಸ್, ಜೆಡಿಎಸ್ ಶಾಸಕ
ಪುತ್ರ ಕುಮಾರಸ್ವಾಮಿಯವರ ಪಾತ್ರವಿರಬಹುದೇ?


ಅಭಿವೃದ್ಧಿ ವಿಷಯ ಬಂದಾಗ ಪಕ್ಷಾತೀತವಾಗಿ ಕೆಲಸ ಮಾಡಬೇಕು -ಆರ್.ವಿ. ದೇಶಪಾಂಡೆ, ಮಾಜಿ ಸಚಿವ
ಪಕ್ಷತ್ಯಜಿಸುವ ಉದ್ದೇಶವೇನಾದರೂ ಇದೆಯೆ?


ಜೆಡಿಎಸ್ ಬಿಜೆಪಿಯೊಂದಿಗೆ ವಿಲೀನವಾದರೆ ನಾನು ರಾಜಕೀಯ ನಿವೃತ್ತಿಯಾಗುತ್ತೇನೆ - ಎಚ್.ಡಿ.ರೇವಣ್ಣ, ಶಾಸಕ
ವಿಲೀನವಾಗುವುದಕ್ಕಿಂತ ಹೊರಗಿದ್ದೇ ಆಗಾಗ ಹಿಂಬಾಗಿಲ ಮೂಲಕ ಮಲಿನವಾಗುವುದು ಲಾಭದಾಯಕ.


ಕಾಂಗ್ರೆಸ್, ಮುಸ್ಲಿಂ ಲೀಗ್ ಹೊರತುಪಡಿಸಿ ಯಾವ ಪಕ್ಷದೊಂದಿಗೂ ವಿಲೀನ ಅಥವಾ ಹೊಂದಾಣಿಕೆಗೆ ನಾವು ಸಿದ್ಧ - ಕೆ.ಎಸ್.ಈಶ್ವರಪ್ಪ, ಸಚಿವ ಎಸ್‌ಡಿಪಿಐಗೆ ಈ ಮೂಲಕ ಜೊತೆ ಸೇರಲು ಆಹ್ವಾನವೇ?


ರಾಜಕೀಯ ಭವಿಷ್ಯಕ್ಕಾಗಿ ಜೆಡಿಎಸ್‌ಗೆ ಬಿಜೆಪಿ ಜೊತೆ ಹೊಂದಾಣಿಕೆ ಅನಿವಾರ್ಯ - ಶ್ರೀನಿವಾಸ್ ಪ್ರಸಾದ್, ಸಂಸದ
ಜಾತ್ಯತೀತ ಭಾರತದ ಭವಿಷ್ಯ?


ಹಾದಿಯಲ್ಲಿ, ಬೀದಿಯಲ್ಲಿ ನಿಂತು ಮಾತನಾಡಿದರೆ ಸಚಿವ ಸ್ಥಾನ ಸಿಗುವುದಿಲ್ಲ, ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡುವುದು- ಎಂ.ಪಿ.ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ
ಹಾಗೆಂದು ಶೋಭಾ ಕರಂದ್ಲಾಜೆಯವರ ಮುಂದೆ ಅತ್ತರೆ ಅವರೇನು ಮಾಡುವುದು ಪಾಪ?


ನನ್ನನ್ನು ಮಂತ್ರಿ ಮಾಡಿ ಎಂದು ಇನ್ನೆಂದೂ ಮುಖ್ಯಮಂತ್ರಿ ಮನೆ ಬಾಗಿಲಿಗೆ ಹೊಗುವುದಿಲ್ಲ - ಎಚ್.ವಿಶ್ವನಾಥ್,ವಿ.ಪ.ಸದಸ್ಯ
ಮನೆಯಿಂದ ಅವರೇ ಹೊರ ಹಾಕಿರುವಾಗ, ನೀವು ಹೋಗುವುದಾದರೂ ಹೇಗೆ?


 ಆಧುನಿಕ ತಂತ್ರಜ್ಞಾನದ ವೇಗದ ನಡುವೆ ಸುಳ್ಳು ಸುದ್ದಿಗಳು ವಿಜೃಂಭಿಸುತ್ತಿವೆ - ವೆಂಕಯ್ಯ ನಾಯ್ಡು, ಉಪ ರಾಷ್ಟ್ರಪತಿ
ಭಾರತ ವಿಶ್ವದಲ್ಲಿ ವಿಜೃಂಭಿಸುತ್ತಿರುವುದು ಈ ಮೂಲಕವೇ.


ರೈತರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ರೈತ ಮಸೂದೆಯನ್ನು ಜಾರಿಗೆ ತರಲಾಗಿದೆ -ಬಿ.ವೈ.ರಾಘವೇಂದ್ರ, ಸಂಸದ
ಮತ್ತೇಕೆ ಅವರು ದಿಲ್ಲಿಯ ಬೀದಿಯಲ್ಲಿ ಸಾಯುತ್ತಿದ್ದಾರೆ?


ಗೋವಾದಲ್ಲಿ ಗೋಮಾಂಸದ ಕೊರತೆಯನ್ನು ನಿವಾರಿಸಲು ನೆರೆ ರಾಜ್ಯಗಳಿಂದ ಗೋವುಗಳನ್ನು ಖರೀದಿಸಲಾಗುವುದು - ಪ್ರಮೋದ್ ಸಾವಂತ್, ಗೋವಾ ಮುಖ್ಯಮಂತ್ರಿ
ಬಹುಶಃ ಕೇರಳದಲ್ಲಿರುವ ಕಮ್ಯುನಿಸ್ಟ್ ಗೋವುಗಳ ಬಗ್ಗೆ ಮಾತನಾಡುತ್ತಿರಬೇಕು.


ದೇಶದ ಪ್ರಗತಿಗೆ ಧರ್ಮ ಅಡ್ಡಿಯಾಗಬಾರದು - ನರೇಂದ್ರ ಮೋದಿ, ಪ್ರಧಾನಿ
ಸದ್ಯಕ್ಕೆ ನೀವೇ ಅತಿ ದೊಡ್ಡ ಅಡ್ಡಿ.


ಪಕ್ಷ ಮತ್ತು ಹಿರಿಯ ಮುಖಂಡರು ಬಯಸಿದರೆ ಕಾಂಗ್ರೆಸ್‌ನ ಯಾವುದೇ ಜವಾಬ್ದಾರಿ ಹೊರಲು ನಾನು ಸಿದ್ಧ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ ಕಾಂಗ್ರೆಸ್‌ನ ಸೋಲಿನ ಜವಾಬ್ದಾರಿಯನ್ನು ಹೊರಲು ಬಯಸಿದ್ದಾರೆ.


ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ಈ ಹಿಂದೆಯೂ ನನ್ನ ದೋಸ್ತ್ ಈಗಲೂ ನನ್ನ ದೋಸ್ತ್ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಸಿದ್ದರಾಮಯ್ಯರ ದೋಸ್ತಿಯ ಕುರಿತಂತೆ ಒಂದಿಷ್ಟು ಅನುಮಾನವಿದೆ.


ಕೊರೋನಕ್ಕೆ ಹೆದರುವ ಬದಲು ಎಚ್ಚರಿಕೆ ತೆಗೆದುಕೊಳ್ಳುವುದು ಒಳ್ಳೆಯದು - ಡಾ.ಸುಧಾಕರ್, ಸಚಿವ
ಈ ಎಚ್ಚರಿಕೆಯನ್ನು ರಾತ್ರಿ ಎಷ್ಟು ಗಂಟೆಗೆ ತೆಗೆದುಕೊಳ್ಳಬೇಕು ಎನ್ನುವುದನ್ನೂ ಹೇಳಿ.


ರವೀಂದ್ರನಾಥ್ ಟಾಗೋರ್‌ರ ದೂರದೃಷ್ಟಿಯೇ ಆತ್ಮ ನಿರ್ಭರ ಕ್ಕೆ ಸ್ಫೂರ್ತಿ - ನರೇಂದ್ರ ಮೋದಿ,ಪ್ರಧಾನಿ

ಹಾಗೆಂದು ರವೀಂದ್ರ ನಾಥ್ ಟಾಗೋರ್‌ರಂತೆ ಗಡ್ಡ ಬಿಟ್ಟಿರುವುದೇ? 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...