ಧರ್ಮೇಗೌಡರನ್ನು ಪೀಠದಲ್ಲಿ ಕೂರಲು ಪ್ರಚೋದನೆ ಕೊಟ್ಟವರ ಬಗ್ಗೆ ತನಿಖೆಯಾಗಲಿ: ಎಸ್.ಆರ್.ಪಾಟೀಲ್

Update: 2020-12-29 18:17 GMT

ಬಾಗಲಕೋಟೆ, ಡಿ.29: ನಿಯಮ ಬಾಹಿರವಾಗಿ ಉಪಸಭಾಪತಿ ಧರ್ಮೇಗೌಡ ಅವರನ್ನು ವಿಧಾನ ಪರಿಷತ್ತಿನ ಸಭಾಪತಿ ಪೀಠದಲ್ಲಿ ಕುಳಿತುಕೊಳ್ಳಲು ಪ್ರಚೋದನೆ ನೀಡಿದವರ ಬಗ್ಗೆ ತನಿಖೆಯಾಗಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.

ಮಂಗಳವಾರ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ತಿನಲ್ಲಿ ಸಭಾಪತಿ ಕುರ್ಚಿ ಗದ್ದಲದಿಂದಲೇ ಉಪಸಭಾಪತಿ ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾನು ಹೇಳಲು ಹೋಗುವುದಿಲ್ಲ. ಈ ಪ್ರಕರಣ ಈ ದೇಶದ ಕಾನೂನಿಗೆ ಬಿಟ್ಟ ವಿಚಾರ. ಕಾನೂನು ಪ್ರಕಾರ ತನಿಖೆ ಆದಾಗ ಯಾರು ಕಾರಣ ಅನ್ನೋದು ಗೊತ್ತಾಗುತ್ತೆ ಎಂದು ತಿಳಿಸಿದರು.

ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಸೋಮವಾರ ತಡರಾತ್ರಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಖಿನ್ನತೆಯಿಂದಾಗಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ. ಅವರ ಖಿನ್ನತೆಗೆ ಇತ್ತೀಚೆಗೆ ವಿಧಾನಪರಿಷತ್‍ನಲ್ಲಿ ನಡೆದ ಗದ್ದಲವೇ ಕಾರಣ ಎನ್ನುವ ವರದಿಗಳು ಕೇಳಿ ಬರುತ್ತಿದೆ. ಸಾಕಷ್ಟು ಊಹಾಪೋಹಗಳು ಇರುವ ಕಾರಣ ಸೂಕ್ತ ತನಿಖೆ ನಡೆಸಬೇಕೆನ್ನುವ ಆಗ್ರಹ ಕೂಡ ಕೇಳಿ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News