×
Ad

ಸಜಿಪನಡು ಗ್ರಾ.ಪಂ. ಫಲಿತಾಂಶ ಪ್ರಕಟ: 8 ಸ್ಥಾನಗಳಲ್ಲಿ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು

Update: 2020-12-30 18:17 IST

ಬಂಟ್ವಾಳ: ತಾಲೂಕಿನ ಸಜಿಪನಡು ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಕೊನೆ ಕ್ಷಣದವರೆಗೆ ಭಾರೀ ಕುತೂಹಲವನ್ನು ಕೆರಳಿಸಿ ಕೊನೆಗೆ ನಡೆದ ಟಾಸ್ ನಲ್ಲಿ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದಾರೆ‌.

ಬೆಳಗ್ಗೆ ಆರಂಭಗೊಂಡ ಮತ ಎಣಿಕೆ ಸಂಜೆ 6 ಗಂಟೆ ವೇಳೆಗೆ ಮುಕ್ತಾಯಗೊಂಡಿದ್ದು ಒಟ್ಟು 15 ಅಭ್ಯರ್ಥಿಗಳ ಪೈಕಿ 7 ಎಸ್‌ಡಿಪಿಐ ಅಭ್ಯರ್ಥಿಗಳು, 4 ಕಾಂಗ್ರೆಸ್ ಅಭ್ಯರ್ಥಿಗಳು, 3 ಬಿಜೆಪಿ ಅಭ್ಯರ್ಥಿಗಳು ವಿಜಯಿಯಾಗಿದ್ದರು. ಒಂದು ಅಭ್ಯರ್ಥಿಯ ಮತ ಎಣಿಕೆ ಬಾಕಿ ಆಗಿತ್ತು. 7 ಸ್ಥಾನಗಳಲ್ಲಿ ಗೆದ್ದ ಎಸ್‌ಡಿಪಿಐಗೆ ಅಧಿಕಾರ ಹಿಡಿಯಲು 1 ಸ್ಥಾನದ ಅಗತ್ಯ ಇತ್ತು.

ಗ್ರಾಮದ ನಾಲ್ಕನೇ ವಾರ್ಡ್ ನ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿ ಇಸ್ಮಾಯಿಲ್ 462 ಮತಗಳನ್ನು ಪಡೆದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಮನಾಥ ಕೂಡಾ 462 ಮತಗಳನ್ನು ಪಡೆದು ಟೈ ಆಗಿತ್ತು. ಹೀಗಾಗಿ ಟಾಸ್ ಹಾಕುವ ಮೂಲಕ ವಿಜಯ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದ್ದು ಚುನಾವಣಾ ಅಧಿಕಾರಿ ಹಾಕಿದ ಟಾಸ್ ನಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಇಸ್ಮಾಯಿಲ್ ವಿಜಯಿಯಾದರು. ಈ ಮೂಲಕ ಒಟ್ಟು 8 ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News