ಗ್ರಾಮ ಪಂಚಾಯತ್ ಚುನಾವಣೆ: ಫಲಿತಾಂಶಕ್ಕೂ ಮುನ್ನ ಸಾವನ್ನಪ್ಪಿದ್ದ ಅಭ್ಯರ್ಥಿಗೆ ಗೆಲುವು

Update: 2020-12-30 13:04 GMT

ಬೆಳಗಾವಿ, ಡಿ.30: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮ ಪಂಚಾಯತ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಸಿ.ಬಿ.ಅಂಬೋಜಿ ಅವರು 414 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಆದರೆ, ಇದೇ ಡಿ.27ರಂದು ಅಂಬೋಜಿ ಮೃತಪಟ್ಟಿದ್ದಾರೆ.

ಅನಾರೋಗ್ಯದಿಂದ ನ್ಯಾಯವಾದಿ ಸಿ.ಬಿ.ಅಂಬೋಜಿ(64) ಸಾವನ್ನಪ್ಪಿದ್ದರು. ಕಕ್ಕೇರಿ ಗ್ರಾ.ಪಂ ವಾರ್ಡ್ ನಂಬರ್ ಎರಡರಿಂದ ಸಿ.ಬಿ.ಅಂಬೋಜಿ ಅವರು ಸ್ಪರ್ಧಿಸಿದ್ದರು.

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮ ಪಂಚಾಯತ್ ನ ಮೊದಲ ಹಂತದ, ಡಿ.22ರಂದು ಮತದಾನವಾಗಿತ್ತು. ಡಿ.30ರ ಬುಧವಾರ ಫಲಿತಾಂಶ ಪ್ರಕಟವಾಗಿದ್ದು, ಆದರೆ ಆ ಗೆಲುವನ್ನು ಸಂಭ್ರಮಿಸಲು ಅಭ್ಯರ್ಥಿಯೇ ಇಲ್ಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News