ತಾಯಿ ಕಾರ್ಡ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪ: ನರ್ಸ್ ಅಮಾನತು

Update: 2020-12-30 14:52 GMT

ರಾಯಚೂರು, ಡಿ.30: ಮಹಿಳೆಯೊಬ್ಬರಿಗೆ ತಾಯಿ ಕಾರ್ಡ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಗ್ಯ ಇಲಾಖೆಯ ನರ್ಸ್ ಒಬ್ಬರನ್ನು ರಾಯಚೂರು ಜಿಲ್ಲಾ ಆರೋಗ್ಯಾಧಿಕಾರಿಗಳು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಲ್ಲದಗುಡ್ಡದ ಉಪ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಾವಿತ್ರಿ ಎಂಬವರು ಮಹಿಳೆಯೊಬ್ಬರಿಗೆ ತಾಯಿ ಕಾರ್ಡ್ ವಿತರಿಸಲು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದ್ದು, ನರ್ಸ್ ಲಂಚಕ್ಕೆ ಬೇಡಿಕೆ ಇಟ್ಟಿದ್ದನ್ನು ಸಂಬಂಧಿಕರು ವಿಡಿಯೋ ಮಾಡಿಕೊಂಡಿದ್ದಾರೆ.

ಹೀಗೆ ವಿಡಿಯೋ ಮಾಡಿಕೊಂಡ ಅವರು, ತಾಯಿ ಕಾರ್ಡ್ ಕೊಡುವುದಕ್ಕೂ ಈ ನರ್ಸ್ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು. ಇದನ್ನು ವೀಕ್ಷಿಸಿದ ರಾಯಚೂರು ಜಿಲ್ಲಾ ಆರೋಗ್ಯಾಧಿಕಾರಿಗಳು, ಮಸ್ಕಿ ತಾಲೂಕಿನ ಮಲ್ಲದಗುಡ್ಡದ ಉಪ ಆರೋಗ್ಯ ಕೇಂದ್ರದ ನರ್ಸ್ ಸಾವಿತ್ರಿಯವರನ್ನು ಅಮಾನತುಗೊಳಿಸಿ, ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News