ಕೊಡಗು ಜಿಲ್ಲೆಯ ಗ್ರಾ.ಪ. ಚುನಾವಣೆಯಲ್ಲಿ 12 ಸ್ಥಾನ ಪಡೆದ ಎಸ್ ಡಿಪಿಐ

Update: 2020-12-31 11:12 GMT

ಮಡಿಕೇರಿ : ಈ ಹಿಂದಿನ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 10 ಸ್ಥಾನ ಪಡೆದಿದ್ದ ಎಸ್ ಡಿಪಿಐ ಇದೀಗ 3 ತಾಲ್ಲೂಕಿನ ಸುಂಟಿಕೊಪ್ಪ 4, ಐಗೂರು 1, ಮೇಕೇರಿ 2, ಕಲ್ಲುಬಾಣೆ ಆರ್ಜಿ 1, ನೆಲ್ಲಿಹುದಿಕೇರಿ 1, ಕೊಂಡಂಗೇರಿ 2, ನಾಪೊಕ್ಲು 1 ಗ್ರಾಮ ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ  12 ಸ್ಥಾನ  ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ.

ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ 35 ಅಭ್ಯರ್ಥಿಗಳು  ಎಸ್ ಡಿಪಿಐ ಬೆಂಬಲಿತರಾಗಿ  ಸ್ಪರ್ಧಾ ಕಣದಲ್ಲಿದ್ದು 12 ಅಭ್ಯರ್ಥಿಗಳು  ಗೆಲುವಿನೊಂದಿಗೆ 5 ಮಂದಿ ಅಭ್ಯರ್ಥಿಗಳು ಕೆಲವೇ ಅಂತರದ ಮತಗಳಿಂದ ಸೋಲನುಭವಿಸಿದ್ದಾರೆ.

ಕಳೆದ ಬಾರಿ ಸಿದ್ಧಾಪುರದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಪೈಪೋಟಿ ನೀಡಿದ್ದ ಎಸ್ ಡಿಪಿಐ 8 ಸ್ಥಾನಗಳಲ್ಲಿ ಸ್ಪರ್ಧಿಸಿ 5 ಸ್ಥಾನಗಳಿಸಿತ್ತು. ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಸ್ ಡಿಪಿಐ ಪಕ್ಷದ 2 ಅಭ್ಯರ್ಥಿಗಳು ಮಾತ್ರ ಸ್ಪರ್ಧೆಯಲ್ಲಿದ್ದರು. ಕೆಲವೇ ಅಂತರ ಗಳ ಮತದಿಂದ ಸೋಲು ಕಂಡಿದ್ದಾರೆ.

ಗ್ರಾಮದ ಅಭಿವದ್ಧಿ ಹಾಗೂ ಜನಪರ ಸೇವೆಗೆ ಮತದಾರರು ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚು ಬಹುಮತ ನೀಡಿದ್ದಾರೆ ಎಂದು ಎಸ್ ಡಿಪಿಐ ಪಕ್ಷದ ಜಿಲ್ಲಾ ಅಧ್ಯಕ್ಷ ಮನ್ಸೂರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News