ಬಿಎಸ್-4 ವಾಹನಗಳಿಗೆ ನೋಂದಾಯಿಸಿಕೊಳ್ಳಲು ಕೊನೆಯ ಅವಕಾಶ
Update: 2020-12-31 18:16 IST
ಬೆಂಗಳೂರು, ಡಿ. 31: ಕೋರ್ಟ್ ಆದೇಶದನ್ವಯ ಎಲ್ಲ ವಾಹನ ಮಾಲಕರು 2020ರ ಮಾ.31ಕ್ಕಿಂತ ಮೊದಲು ಮಾರಾಟವಾಗಿ, ಇ-ವಾಹನ್ ಪೋರ್ಟಲ್‍ನಲ್ಲಿ ವಿವರಗಳನ್ನು ದಾಖಲಿಸಿ ತಾತ್ಕಾಲಿಕ ನೋಂದಣಿ ಹೊಂದಿರುವ ಮತ್ತು ತೆರಿಗೆ ಹಾಗೂ ಶುಲ್ಕ ಪಾವತಿಸಿರುವ ಮತ್ತು ನೋಂದಣಿಗೆ ಬಾಕಿ ಇರುವ ಬಿಎಸ್-4 ವಾಹನಗಳಿಗೆ ಜ.1ರಿಂದ 16ರ ವರೆಗೆ ರಾಜ್ಯದಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ವಾಹನ ಮಾಲಕರು ಬಿಎಸ್-4 ಮಾಪನದ ವಾಹನಗಳನ್ನು ಸದರಿ ಅವಧಿಯಲ್ಲಿ ಸಂಬಂಧಿಸಿದ ನೋಂದಣಿ ಪ್ರಾಧಿಕಾರದಲ್ಲಿ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ನೋಂದಣಿ ಮಾಡಿಕೊಳ್ಳುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತರು ಪ್ರಕಟಣಿಗೆ ಕೋರಿದ್ದಾರೆ.