ಮೂವರು ಶಿಕ್ಷಕರಿಗೆ ಕೊರೋನ ಸೋಂಕು ದೃಢ: ಎರಡು ಶಾಲೆಗಳಿಗೆ 7 ದಿನಗಳ ರಜೆ ಘೋಷಣೆ

Update: 2021-01-04 16:14 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಜ.4: ಜಿಲ್ಲೆಯ ಖಾಸಗಿ ಶಾಲೆಯ ಇಬ್ಬರು ಶಿಕ್ಷಕರು ಹಾಗೂ ಸರ್ಕಾರಿ ಶಾಲೆಯ ಓರ್ವ ಶಿಕ್ಷಕನಿಗೆ ಕೊರೋನ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ 7 ದಿನಗಳ ಕಾಲ ಶಾಲೆಯನ್ನು ಬಂದ್ ಮಾಡಲಾಗಿದೆ.

ಕಳಸ ಹೋಬಳಿ ಜೆಎಂಇ ಶಾಲೆಯ ಇಬ್ಬರು ಶಿಕ್ಷಕರು ಹಾಗೂ ಮೂಡಿಗೆರೆ ತಾಲೂಕು ನಿಡುವಾಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಓರ್ವ ಶಿಕ್ಷಕರಿಗೆ ಕೊರೋನ ಸೋಂಕು ಪತ್ತೆಯಾಗಿದೆ.

ಕಳಸ ಪಟ್ಟಣದ ಜೆಎಂಇ ಶಾಲೆಯಲ್ಲಿ 15 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಇಬ್ಬರು ಶಿಕ್ಷಕರಿಗೆ ಕೊರೋನ ಪಾಸಿಟಿವ್ ಬಂದಿದೆ. ಉಳಿದ 13 ಮಂದಿಗೆ ಕೊರೋನ ನೆಗೆಟಿವ್ ಬಂದಿದೆ. 

ಮೂಡಿಗೆರೆ ತಾಲೂಕು ನಿಡುವಾಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು ಓರ್ವ ಶಿಕ್ಷಕರಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಶಿಕ್ಷಕರಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಎರಡು ಶಾಲೆಗಳನ್ನು 7 ದಿನಗಳ ಅವಧಿಗೆ ರಜೆ ಘೋಷಣೆ ಮಾಡಲಾಗಿದೆ.

ಶಾಲೆ ಕಾಲೇಜು ಆರಂಭಕ್ಕೆ ಸರ್ಕಾರ ಜ.1ರಿಂದ ಆದೇಶ ನೀಡಿದ್ದು, ಶಾಲೆ ಆರಂಭವಾಗಿ ಎರಡು ದಿನ ಕಳೆಯುವಷ್ಟರಲ್ಲಿ ಜಿಲ್ಲೆಯ ಮೂರು ಮಂದಿ ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿರುವುದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳಸ ಜೆಎಂಇ ಶಾಲೆ ಶಿಕ್ಷಕರು ಕೊರೋನ ರಿಪೋರ್ಟ್ ಕೈ ಸೇರದಿದ್ದರೂ ಶಾಲೆಗೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ.  

ಜಿಲ್ಲೆಯ ಕಳಸ ಪಟ್ಟಣದ ಜೆಎಂಇ ಶಾಲೆಯ ಇಬ್ಬರು ಶಿಕ್ಷಕರು ಹಾಗೂ ಮೂಡಿಗೆರೆ ತಾಲೂಕು ನಿಡುವಾಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಓರ್ವ ಶಿಕ್ಷಕರಿಗೆ ಕೊರೋನ ಸೋಂಕು ಪಾಸಿಟಿವ್ ಬಂದಿದೆ. ಮುಂಜಾಗೃತ ಕ್ರಮವಾಗಿ ಎರಡು ಶಾಲೆಗಳಲ್ಲಿ 7 ದಿನಗಳ ಮಟ್ಟಿಗೆ ರಜೆ ಘೋಷಣೆ ಮಾಡಲಾಗಿದೆ
-ಬಿ.ವಿ.ಮಲ್ಲೇಶಪ್ಪ, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News