ಮಮತಾ ಸಂಪುಟದಿಂದ ಮತ್ತೋರ್ವ ಸಚಿವ ಔಟ್:‌ ರಾಜೀನಾಮೆ ನೀಡಿದ ಕ್ರೀಡಾ ಸಚಿವ

Update: 2021-01-05 12:31 GMT

ಕೋಲ್ಕತಾ:ತೃಣಮೂಲ ಕಾಂಗ್ರೆಸ್ ಶಾಸಕ ಹಾಗೂ ಸಚಿವ ಲಕ್ಷ್ಮೀ ರತನ್ ಶುಕ್ಲಾ ,ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪ.ಬಂಗಾಳ ಸರಕಾರದಲ್ಲಿ ಸಚಿವ ಸ್ಥಾನವನ್ನು ತ್ಯಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣಗೆ ಕೆಲವೇ ತಿಂಗಳು ಬಾಕಿ ಇರುವಾಗ ಮಮತಾ ಅವರಿಗೆ ಆಪ್ತರಾಗಿದ್ದ ಸುವೇಂದು ಅಧಿಕಾರಿ ಸಹಿತ  ಹಲವು ತೃಣಮೂಲ ಕಾಂಗ್ರೆಸ್ ನಾಯಕರುಗಳು ಬಿಜೆಪಿಗೆ ಸೇರಿದ ಕೆಲವೇ ದಿನಗಳ ನಂತರ 39ರ ವಯಸ್ಸಿನ ಶುಕ್ಲಾ ರಾಜ್ಯ ಕ್ರೀಡಾಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಶುಕ್ಲಾ ಅವರು ರಾಜೀನಾಮೆ ಪತ್ರವನ್ನು ಸಿಎಂಗೆ ಕಳುಹಿಸಿಕೊಟ್ಟಿದ್ದಾರೆ. ಒಂದು ಪ್ರತಿಯನ್ನು ರಾಜ್ಯಪಾಲ ಜಗದೀಪ್ ಧಂಖರ್ ಗೆ ಸಲ್ಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಬಂಗಾಳ ರಣಜಿ ತಂಡದ ಮಾಜಿ ನಾಯಕ ಶುಕ್ಲಾ ಅವರು ಹೌರ್ಹಾದ ಶಾಸಕರಾಗಿದ್ದಾರೆ.  
ನಾನು ರಾಜಕೀಯದಿಂದ  ನಿವೃತ್ತಿ ಪಡೆಯಲು ಬಯಸಿರುವುದಾಗಿ ಮಮತಾಗೆ ಬರೆದ ಪತ್ರದಲ್ಲಿ ಶುಕ್ಲಾ ತಿಳಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. 

"ನಾನು ಲಕ್ಷ್ಮೀರತನ್ ನೀಡಿರುವ ರಾಜೀನಾಮೆಯನ್ನು ಸ್ವೀಕರಿಸಿದ್ದೇನೆ. ಅವರು ಕ್ರೀಡೆಗೆ ಮರಳಲು ಬಯಸಿದ್ದಾರೆ. ನಮ್ಮೊಳಗೆ ಯಾವುದೇ 'ತಪ್ಪು ತಿಳುವಳಿಕೆ'  ಇರಲಿಲ್ಲ. ..ಚುನಾವಣೆಯ ತನಕ ಅವರು ಶಾಸಕರಾಗಿ ಮುಂದುವರಿಯಲಿದ್ದಾರೆ. ರತನ್ ರಾಜೀನಾಮೆಯನ್ನು ಸ್ವೀಕರಿಸಬೇಕೆಂದು ರಾಜ್ಯಪಾಲರಲ್ಲಿ ನಾನು ಶಿಫಾರಸು ಮಾಡುತ್ತೇನೆ'' ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News