ದ್ವಿಚಕ್ರ ವಾಹನ ಕಳವು ಪ್ರಕರಣ : ಇಬ್ಬರು ಸೆರೆ

Update: 2021-01-06 07:06 GMT

ಶಿವಮೊಗ್ಗ :  ದ್ವಿಚಕ್ರ ವಾಹನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಲಕ್ಷಾಂತರ ರೂ. ಮೌಲ್ಯದ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿರಾಳಕೊಪ್ಪ ಟೌನ್ ವಾಸಿ‌ಗಳಾದ  ಝಮೀರ್ ಅಹ್ಮದ್ (30) ಹಾಗೂ ಶಾರೂಖ್ (27) ಬಂಧಿತ ಆರೋಪಿಗಳು.

ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ದ್ವಿ ಚಕ್ರ ವಾಹನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ‌ ಪೊಲೀಸರು 4 ದ್ವಿ ಚಕ್ರ ವಾಹನಗಳು ಹಾಗೂ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 2017ನೇ ಸಾಲಿನಲ್ಲಿ ದಾಖಲಾದ 1 ದ್ವಿ ಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದ ದ್ವಿಚಕ್ರ ವಾಹನ ಹಾಗೂ ಇತರೆ 2 ದ್ವಿಚಕ್ರ ವಾಹನಗಳು ಸೇರಿದಂತೆ ಮೂರು ಲಕ್ಷ ರೂ.‌ ಮೌಲ್ಯದ ಒಟ್ಟು 7 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿತರನ್ನು  ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಎಸ್ಪಿ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.

ಆರೋಪಿಗಳ ಪತ್ತೆಗೆ  ಶಿಕಾರಿಪುರ ಉಪ ವಿಭಾಗದ ಡಿವೈಎಸ್.ಪಿ ವಿನಾಯಕ ಶೆಟಗೇರಿ ಮಾರ್ಗದರ್ಶನದಲ್ಲಿ, ಶಿಕಾರಿಪುರ ಸಿಪಿಐ
ಗುರುರಾಜ್ ಎನ್ ಮೈಲಾರ್ ನೇತೃತ್ವದಲ್ಲಿ ಶಿರಾಳಕೊಪ್ಪ‌ ಸಬ್ ಇನ್ಸ್‌ಪೆಕ್ಟರ್ ರಮೇಶ್ ಮತ್ತು ಸಿಬ್ಬಂದಿ ಸಿಎಚ್.ಸಿ ಕೊಟ್ರೇಶ್, ಸಂಜೀವ್, ಮಧುಸೂದನ್ ಮತ್ತು ಸಿಪಿಸಿ ಮಂಜುನಾಥ್, ಬಸವಕುಮಾರ್ ಅವರುಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು‌ ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News