ಸರಕಾರಿ ಮೆಡಿಕಲ್ ಕಾಲೇಜಿನ ವಸತಿ ಗೃಹದೊಳಗೆ ಓಡಾಡಿದ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Update: 2021-01-07 12:57 GMT

ಚಾಮರಾಜನಗರ, ಜ.7: ಕಾಡಿನಿಂದ ಬಂದ ಚಿರತೆಯೊಂದು ಸರಕಾರಿ ಮೆಡಿಕಲ್ ಕಾಲೇಜಿನ ವಸತಿ ಗೃಹದೊಳಗೆ ನುಗ್ಗಿ, ಕಾರಿಡಾರ್ ನಲ್ಲೇ ಓಡಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಚಾಮರಾಜನಗರ ತಾಲೂಕಿನ ಯಡಬೆಟ್ಟದ ಬಳಿ ಇರುವ ಸರ್ಕಾರಿ ಮೆಡಿಕಲ್ ಕಾಲೇಜಿನ ವಸತಿ ಗೃಹದ ಮೊದಲೇ ಮಹಡಿಯಲ್ಲಿ ಚಿರತೆಯೊಂದು ರಾತ್ರಿ 9 ಗಂಟೆಯ ವೇಳೆಗೆ ಬಂದು ತಿರುಗಾಡಿದ್ದು, ಈ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಿರತೆ ವಸತಿ ಗೃಹದೊಳಗೆ ಪ್ರವೇಶಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ತೋರಿಸಲಾಗಿದೆ. ಚಿರತೆಯು ಕಾರಿಡಾರ್ ಮೂಲಕ ಓಡಿ, ಹಿಂದಕ್ಕೆ ತಿರುಗಿ ಮತ್ತೆ ಕಾರಿಡಾರ್‌ನಿಂದ ನಿರ್ಗಮಿಸುವ ದೃಶ್ಯ ವಿಡಿಯೋದಲ್ಲಿ ಕಂಡುಬರುತ್ತದೆ.

ವಸತಿ ಸಮುಚ್ಚಯದೊಳಗೆ ಚಿರತೆ ಬಂದಿದ್ದರಿಂದ ಅಲ್ಲಿ ವಾಸ ಮಾಡುವ ಮೆಡಿಕಲ್ ಕಾಲೇಜು ಸಿಬ್ಬಂದಿಗಳು ಆತಂಕಕ್ಕೀಡಾಗಿದ್ದರು. ಆದರೆ ಚಿರತೆ ಯಾರಿಗೂ ತೊಂದರೆ ಕೊಡದೇ ರಾತ್ರಿಯೇ ಕಾಡಿಗೆ ತೆರಳಿತು ಎನ್ನಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News