×
Ad

ನಾನು ಪರಿಷತ್ ಸಭಾಪತಿ ಆಗಲು ಮೂರು ಪಕ್ಷಗಳ ಸಹಮತವಿದೆ: ಬಸವರಾಜ ಹೊರಟ್ಟಿ

Update: 2021-01-07 23:41 IST

ಹುಬ್ಬಳ್ಳಿ, ಜ.7: ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಅನ್ನೋದು ಗಾಳಿ ಸುದ್ದಿ ಅಷ್ಟೇ. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯಾಗಲಿ, ವಿಲೀನವಾಗಲಿ ಮಾಡುವ ಪ್ರಶ್ನೆಯೆ ಇಲ್ಲ ಎಂದು ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಸಭಾಪತಿಯನ್ನು ಪದಚ್ಯುತಿಗೊಳಿಸಲು ಬಿಜೆಪಿ ಜೊತೆಗೆ ಹೊಂದಾಣಿಕೆ ಆಗಿತ್ತು. ಜೆಡಿಎಸ್ ಪಕ್ಷವನ್ನು ಬಿಟ್ಟು ಸಭಾಪತಿಯನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ನಾನು ಪರಿಷತ್ತಿನ ಸಭಾಪತಿ ಆಗಲು ಮೂರು ಪಕ್ಷಗಳಿಂದ ಸಹಮತವಿದೆ ಎಂದರು.

ವಿಧಾನಪರಿಷತ್ತಿನಲ್ಲಿ ನಾನು ಹಿರಿಯ ಸದಸ್ಯ ಎನ್ನುವ ಕಾರಣಕ್ಕೆ ಮೂರು ಪಕ್ಷಗಳ ಮುಖಂಡರು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಮತ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಈ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನಾನು ಸಭಾಪತಿಯಾಗಲು ಸದನದಲ್ಲಿರುವ ಬಹುತೇಕ ಎಲ್ಲ ಸದಸ್ಯರ ಸಹಮತವಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಇದು ನನ್ನ ಕೊನೆಯ ಅವಧಿ ಅಲ್ಲಾ. ಮತ್ತೆ ಮುಂದೆಯೂ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇನೆ. ಹೆರಿಗೆ ಆದಾಗ ಮಕ್ಕಳು ಸಾಕು ಅನ್ನೋ ಭಾವನೆ ಬರುತ್ತೆ. ಆದರೆ, ಆನಂತರ ಮತ್ತೆ ಮಕ್ಕಳನ್ನು ಮಾಡಲ್ಲವೆ ಎನ್ನುವ ಮೂಲಕ ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಅವರು ಇತಿಶ್ರೀ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News