ಶಿವಮೊಗ್ಗ: ಪಾರ್ಕ್ ನಲ್ಲಿ ಹಕ್ಕಿಗಳ ಸಾವು
Update: 2021-01-08 10:56 IST
ಶಿವಮೊಗ್ಗ, ಜ.8: ದೇಶಾದ್ಯಂತ ಹಕ್ಕಿ ಜ್ವರದ ಭೀತಿ ಎದುರಾಗಿರುವ ಬೆನ್ನಲ್ಲೇ ಶಿವಮೊಗ್ಗದ ಪಾರ್ಕ್ ವೊಂದರಲ್ಲಿ ಮೂರು ಹಕ್ಕಿಗಳ ಕಳೇಬರ ಪತ್ತೆಯಾಗಿದ್ದು, ಇದು ಜನರ ಆತಂಕಕ್ಕೆ ಕಾರಣವಾಗಿದೆ.
ಎಲ್ ಬಿಎಸ್ ನಗರದ ಪಾರ್ಕ್ ನಲ್ಲಿ ಮೂರು ಹಕ್ಕಿಗಳು ಸಾವನ್ನಪ್ಪಿವೆ. ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಹಕ್ಕಿಗಳ ಕಳೆಬರಹವನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ತೆಗೆದುಕೊಂಡು ಹೋಗಿದ್ದಾರೆ.
ಹಕ್ಕಿಜ್ವರದ ಭೀತಿ:
ಇನ್ನು ಕೇರಳದಲ್ಲಿ ಹಕ್ಕಿಗಳು ಸಾವನ್ನಪ್ಪುತ್ತಿದ್ದು, ಹಕ್ಕಿ ಜ್ವರದ ಭೀತಿ ಎದುರಾಗಿದೆ. ಪಾರ್ಕಿನಲ್ಲಿ ಹಕ್ಕಿಗಳು ಸಾವನ್ನಪ್ಪಿರುವುದನ್ನು ಗಮನಿಸಿರುವ ಜನರಲ್ಲಿ ಹಕ್ಕಿ ಜ್ವರದ ಭಯ ಶುರುವಾಗಿದೆ.
ನಿರ್ಜಲೀಕರಣ ಸಾವಿಗೆ ಕಾರಣ:
ಹಕ್ಕಿಗಳ ಸಾವಿಗೆ ಡಿಹೈಡ್ರೇಷನ್ ಕಾರಣವೆಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಪಾಲಿಕೆ ಆರೋಗ್ಯ ಅಧಿಕಾರಿಗಳು ಹಕ್ಕಿಗಳ ಕಳೆಬರಹವನ್ನು ಪರೀಕ್ಷೆ ಗೆ ರವಾನಿಸಿದ್ದರು. ಈಗ ಮರಣೋತ್ತರ ಪರೀಕ್ಷೆಯಲ್ಲಿ ನಿರ್ಜಲೀಕರಣವೆಂದು ವರದಿ ಬಂದಿದೆ ಎಂದು ಹೇಳಲಾಗಿದೆ.