×
Ad

ಕೆಎಸ್ಸಾರ್ಟಿಸಿ: ವಾರಾಂತ್ಯದ ದರ ಹೆಚ್ಚಳ ಕ್ರಮ ವಾಪಸ್

Update: 2021-01-09 17:27 IST

ಬೆಂಗಳೂರು, ಜ.9: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಪ್ರತಿಷ್ಠಿತ ಸಾರಿಗೆ ಬಸ್‍ಗಳಲ್ಲಿ ವಾರಾಂತ್ಯ(ಶುಕ್ರವಾರ, ರವಿವಾರ)ಗಳಲ್ಲಿ ಜಾರಿ ಮಾಡಲಾಗಿದ್ದ ಶೇ.10ರಷ್ಟು ಹೆಚ್ಚುವರಿ ಪ್ರಯಾಣ ದರವನ್ನು ವಾಪಸ್ ಪಡೆಯಲಾಗಿದೆ.

ಕರಾರಸಾ ನಿಗಮದ ಪ್ರತಿಷ್ಠಿತ ಸಾರಿಗೆಗಳಾದ ರಾಜಹಂಸ, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ ಡ್ರೀಮ್ ಕ್ಲಾಸ್, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಾದ ಶುಕ್ರವಾರ ಹಾಗೂ ರವಿವಾರಗಳಂದು ಶೇ10ರಷ್ಟು ಹೆಚ್ಚುವರಿ(ಮೂಲ ದರ) ಪ್ರಯಾಣ ದರವನ್ನು ಜ.1, 2021 ರಿಂದ ಮಾ.31, 2021ರ ಅವಧಿಗೆ ಹಿಂಪಡೆಯಲಾಗಿದೆ.

ವಾರದ ಎಲ್ಲಾ ದಿನಗಳಂದು ಏಕರೂಪದ ಪ್ರಯಾಣದರ ನಿಗದಿಪಡಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೆಎಸ್ಸಾರ್ಟಿಸಿ ಸಾರಿಗೆ ಸಂಸ್ಥೆ ಪ್ರಕಟನೆಯ ಮೂಲಕ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News