ಹುಬ್ಬಳ್ಳಿ-ಕೊಚ್ಚಿ ನೇರ ವಿಮಾನಯಾನ ಸೇವೆ ಪುನರ್ ಆರಂಭ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2021-01-09 16:21 GMT

ಬೆಂಗಳೂರು, ಜ. 9: ‘ನಾನು ಇಂಡಿಗೋ ವಿಮಾನಯಾನ ಸಂಸ್ಥೆಗೆ ಹುಬ್ಬಳ್ಳಿ-ಗೋವಾ ಮತ್ತು ಹುಬ್ಬಳ್ಳಿ-ಕೊಚ್ಚಿ ನೇರ ವಿಮಾನ ಸೇವೆ ಪುನರಾರಂಭಿಸಲು ವಿನಂತಿಸಿದ್ದೆ. ತನ್ನಿಮಿತ್ತ ಇಂದು ಇಂಡಿಗೋ ಸಂಸ್ಥೆಯ ಹಿರಿಯ ಉನ್ನತ ಅಧಿಕಾರಿಗಳು ಜ.21ರಿಂದ ವಿಮಾನ ಸೇವೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಶನಿವಾರ ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಈ ಕಾರ್ಯಕ್ಕೆ ಸಹಕರಿಸಿದ ಇಂಡಿಗೋ ವಿಮಾನಯಾನ ಸಂಸ್ಥೆಗೆ ಧನ್ಯವಾದ ಸಲ್ಲಿಸುತ್ತೇನೆ. ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ತಮ್ಮೆಲ್ಲರಿಗೂ ಕೋರುತ್ತೇನೆ ಎಂದು ತಿಳಿಸಿದ್ದಾರೆ.

ವಿಮಾನಯಾನದ ವಿವರ: ಮಧ್ಯಾಹ್ನ 1ಕ್ಕೆ ಹುಬ್ಬಳ್ಳಿಯಿಂದ ಹೊರಟು 3.10ಕ್ಕೆ ಕೊಚ್ಚಿ ತಲುಪಲಿದೆ. ಮಧ್ಯಾಹ್ನ 3.45ಕ್ಕೆ ಕೊಚ್ಚಿಯಿಂದ ಹೊರಟು ಸಂಜೆ 5.30ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. 6ಕ್ಕೆ ಹುಬ್ಬಳ್ಳಿಯಿಂದ ಹೊರಟು 7ಕ್ಕೆ ಗೋವಾ ತಲುಪಲಿದೆ. 7.30ಕ್ಕೆ ಗೋವಾಯಿಂದ ಹೊರಟು 8.30ಕ್ಕೆ ಹುಬ್ಬಳ್ಳಿ ತಲುಪಲಿದೆ ಎಂದು ಪ್ರಹ್ಲಾದ್ ಜೋಶಿ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News