ಬಿಜೆಪಿ ಮುಖಂಡರ ಸೋಗಿನಲ್ಲಿ ವಂಚನೆ ಪ್ರಕರಣ: ಯುವರಾಜ್ ಆಸ್ತಿ ಜಪ್ತಿಗೆ ಸಿಸಿಬಿ ಸಿದ್ಧತೆ

Update: 2021-01-16 14:07 GMT

ಬೆಂಗಳೂರು,  ಜ.16: ಬಿಜೆಪಿ ಮುಖಂಡರ ಸೋಗಿನಲ್ಲಿ ವಂಚಿಸಿದ ಆರೋಪದಡಿ ಬಂಧನಕ್ಕೊಳಗಾಗಿರುವ ಯುವರಾಜ್‍ಗೆ ಸೇರಿದ ಎನ್ನಲಾದ 8ಕ್ಕಿಂತ ಅಧಿಕ ಆಸ್ತಿಗಳನ್ನು ಜಪ್ತಿ ಮಾಡಲು ಸಿಸಿಬಿ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಯುವರಾಜ್ ವಿರುದ್ಧ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಅಕ್ರಮವಾಗಿ ಸಂಪಾದನೆ ಎನ್ನಲಾಗುವ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿರುವ ಆಸ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿರುವ ತನಿಖಾಧಿಕಾರಿಗಳು ಜಪ್ತಿ ಪ್ರಕ್ರಿಯೆಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ 60ಕ್ಕೂ ಹೆಚ್ಚು ಕೋಟಿಯ ಸ್ಥಿರ ಮತ್ತು ಚರಾಸ್ಥಿಗಳನ್ನು ಈ ಪ್ರಕರಣದಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇನ್ನೂ ಆಸ್ತಿಯ ಮೌಲ್ಯಮಾಪನ ಸಂಪೂರ್ಣವಾಗಿ ಆಗಿಲ್ಲ ಎನ್ನಲಾಗಿದೆ.

ಎಷ್ಟು ಆಸ್ತಿ?: ಬೆಂಗಳೂರಿನಲ್ಲಿ ಯುವರಾಜ್ ಹೆಸರಿನಲ್ಲಿರುವ ನಿವೇಶನಗಳು, ಪತ್ನಿ ಪ್ರೇಮಾ ಹೆಸರಿನಲ್ಲಿ ಮಂಡ್ಯದಲ್ಲಿರುವ ಜಮೀನು, ಐಷಾರಾಮಿ ಕಾರುಗಳು (ಮರ್ಸಿಡೆಸ್ ಬೆಂಜ್, ರೇಂಜ್ ರೋವರ್ ಜಪ್ತಿ) ಇನ್ನು ಬೇರೆ ಆಸ್ತಿ-ಪಾಸ್ತಿಯನ್ನು ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News