ಪೆಟ್ರೋಲಿಯಂ ಉಳಿಕೆಗಾಗಿ ಬಿಎಂಟಿಸಿಗೆ ರಾಜ್ಯ, ರಾಷ್ಟ್ರ ಪ್ರಶಸ್ತಿ

Update: 2021-01-16 17:31 GMT

ಬೆಂಗಳೂರು, ಜ.15: ಬಿಎಂಟಿಸಿಗೆ ಇಂಧನ ಬಳಕೆಯಲ್ಲಿ ಪ್ರತಿ ಲೀಟರ್ ಗೆ ಹೆಚ್ಚಿನ ಕಿಮೀ(ಕೆಎಂಪಿಎಲ್) ಕ್ರಮಿಸಿದ ಸಾಧನೆಗಾಗಿ ಕೇಂದ್ರ ಸರಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಘ (ಪಿಸಿಆರ್‍ಎ)ದ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳು ಲಭಿಸಿದೆ.

ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಘವು(ಪಿಸಿಆರ್‍ಎ) ಪ್ರಾರಂಭಿಸಿರುವ ಯೋಜನೆಯಡಿಯಲ್ಲಿ ಪ್ರತಿ ಲೀಟರ್ ಗೆ ಗರಿಷ್ಠ ಕಿಮೀ (ಕೆಎಂಪಿಎಲ್) ಸಾಧಿಸಿರುವ ಪ್ರತಿ ರಾಜ್ಯ ಸಾರಿಗೆ ನಿಗಮಗಳಲ್ಲಿ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಘಟಕ ಹಾಗೂ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ರಾಜ್ಯ ಸಾರಿಗೆ ನಿಗಮವನ್ನು ಗುರುತಿಸಿ ಪ್ರತಿ ವರ್ಷ ಪಾರಿತೋಷಕ, ನಗದು ಪ್ರಶಸ್ತಿಯನ್ನು ನೀಡುತ್ತಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಒಂದು ವರ್ಷದ ಅವಧಿಯಲ್ಲಿ ಪ್ರತಿ ಲೀಟರ್ ಗೆ ಗರಿಷ್ಠ ಕಿ.ಮೀ ಮೂಲಕ ಸುಮಾರು 24 ಕೋಟಿ ರೂ. ಉಳಿತಾಯ ಮಾಡಿದೆ. ಇದಕ್ಕಾಗಿ ಪ್ರತಿಷ್ಠಿತ ಸಕ್ಷಮ್-2021 ರಾಷ್ಟ್ರ ಮಟ್ಟದ ಮೊದಲನೆ ಅತ್ಯುತ್ತಮ ರಾಜ್ಯ ಸಾರಿಗೆ ಸಂಸ್ಥೆ ಪ್ರಶಸ್ತಿಯನ್ನು ಪಡೆದಿದೆ. ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಬಿಎಂಟಿಸಿ ನಿರ್ದೇಶಕಿ ಶಿಖಾಗೆ ಹೊಸದಿಲ್ಲಿಯಲ್ಲಿ ನಡೆದ ಆನ್‍ಲೈನ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಬಿಎಂಟಿಸಿಯ 3 ಘಟಕಗಳಾದ ಭೈರತಿ-ಘಟಕ 48, ದೀಪಾಂಜಲಿನಗರ-ಘಟಕ 16 ಮತ್ತು ಕೆಂಗೇರಿ-ಘಟಕ 37 ಇವುಗಳಿಗೆ ರಾಜ್ಯ ಮಟ್ಟದ ಘಟಕಗಳ ಪ್ರಶಸ್ತಿ ಲಭಿಸಿರುತ್ತದೆ. ಸದರಿ ಪ್ರಶಸ್ತಿಯು ಪ್ರತಿ ಘಟಕಕ್ಕೆ ಒಂದು ಪಾರಿತೋಷಕ ಹಾಗೂ 50 ಸಾವಿರ ರೂ. ನಗದು ಬಹುಮಾನ ಲಭಿಸಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News