ಹುಬ್ಬಳ್ಳಿ: ಇಹ್‌ಸಾನ್ ಸೆಂಟರ್ ಲೋಕಾರ್ಪಣೆ ಮತ್ತು ದಶಮಾನೋತ್ಸವ ಘೋಷಣೆ

Update: 2021-01-17 14:53 GMT

ಹುಬ್ಬಳ್ಳಿ,ಜ.17: ಉತ್ತರ ಕರ್ನಾಟಕದ ಶೈಕ್ಷಣಿಕ - ಸಾಮಾಜಿಕ ಸದುನ್ನತಿಗಾಗಿ ಕಳೆದ ಹತ್ತು ವರ್ಷಗಳಿಂದ ರಾಜ್ಯದ ಸುನ್ನೀ ಸಂಘ ಕುಟುಂಬದ ಸಹಯೋಗದೊಂದಿಗೆ ಕಾರ್ಯಾಚರಣೆ ಮಾಡುತ್ತಿರುವ "ಇಹ್‌ಸಾನ್ ಕರ್ನಾಟಕ" ಮಂಡಳಿಯ ಆಶ್ರಯದಲ್ಲಿ ಕೆಸಿಎಫ್ ಸೌದಿ ಅರೇಬಿಯಾ ಸಮಿತಿಯು ಹುಬ್ಬಳ್ಳಿಯಲ್ಲಿ ನಿರ್ಮಿಸಿದ 'ಮಸ್ಜಿದ್ ಎ ಇಹ್‌ಸಾನ್'ನ ಉದ್ಘಾಟನೆಯು ಹುಬ್ಬಳ್ಳಿ ಸೋನಿಯಾ ಗಾಂಧಿ ನಗರದಲ್ಲಿ ನೆರವೇರಿತು.

ಉದ್ಘಾಟನಾ ಸಮಾರಂಭವನ್ನು ಹುಬ್ಬಳ್ಳಿ ಜಿಲ್ಲಾ ಮುಫ್ತಿ ಮೌಲಾನ ಮುಫ್ತಿ ನಿಸಾರ್ ಅಹಮದ್ ಸಾಹಬ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಇಹ್‌ಸಾನ್ ನ ದಶಮಾನೋತ್ಸವವನ್ಮು ಘೋಷಣೆ ಮಾಡಲಾಯಿತು.

2021 ಮಾರ್ಚ್ ಒಂದರಿಂದ ಡಿ. 26 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ 'ಇಹ್‌ಸಾನ್ ಡಿಸೆನಿಯಂ' ಎಂಬ ಹೆಸರಲ್ಲಿ ನಡೆಯುವ ಇಹ್‌ಸಾನ್ ದಶ ವಾರ್ಷಿಕ ಕಾರ್ಯಕ್ರಮವು ಗುಲ್ಬರ್ಗಾದಲ್ಲಿ ಪ್ರಾರಂಭಗೊಂಡು ಚಿತ್ರದುರ್ಗದಲ್ಲಿ ಸಮಾರೋಪಗೊಳ್ಳಲಿದೆ.

'ಶಿಕ್ಷಣ.. ಸಾಂತ್ವನ.. ನವೋತ್ಥಾನ...' ದಶವಾರ್ಷಿಕದ ಘೋಷವಾಕ್ಯವಾಗಿದ್ದು ಅದರ ಅಂಗವಾಗಿ ಉತ್ತರ ಕರ್ನಾಟಕದಲ್ಲಿ ಹತ್ತು ಇಹ್ಸಾನ್ ‌ನಾಲೆಜ್ ವಿಲೇಜ್‌ಗಳು, ನೂರು ಮಸ್ಜಿದ್ ನೂರು ಮದ್ರಸ, ಭಾರತ ಮತ್ತು ವಿದೇಶಗಳಲ್ಲಿ ಇಹ್‌ಸಾನ್ ಸಂಗಮಗಳು, "ಸಫರ್ ಶಮಾಲಿ" ಹೆಸರಿನಲ್ಲಿ  ಉತ್ತರ ಕರ್ನಾಟಕ ಸಂದೇಶ ಯಾತ್ರಾ, ಅಲ್ ಹಸನಾತ್ ಸಾಂತ್ವನ ಚಟುವಟಿಕೆಗಳು, ಇಹ್‌ಸಾನ್ ಖಾಫಿಲಾ, ಆರೋಗ್ಯ ಮತ್ತು ಶುಚಿತ್ವ ಕಾಂಪೈನ್,ತರಬೇತಿ ಶಿಬಿರಗಳು, ದಶವಾರ್ಷಿಕ ಸಂಚಿಕೆ, ಮುಂತಾದ ಹತ್ತು ಅಂಶ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು.

ಕಾರ್ಯಕ್ರಮದಲ್ಲಿ ಇಹ್‌ಸಾನ್ ಕರ್ನಾಟಕ ‌ಅಧ್ಯಕ್ಷ ಶಾಫಿ ಸ‌ಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು.

ಹುಬ್ಬಳ್ಳಿ ನಗರ ಶಾಸಕ ಪ್ರಸಾದ್ ಅಬ್ಬಯ್ಯ ಉದ್ಘಾಟಿಸಿದರು. ದಶ ವಾರ್ಷಿಕ ಘೋಷಣಾ ಫಲಕವನ್ನು ವಿದಾನ ಪರಿಷತ್ ಮಾಜಿ ಸಭಾಪತಿ ಬಸವರಜ್ ಹೊರಟ್ಟಿ ಅನಾವರಣ ಮಾಡಿದರು. ಎಸ್.ವೈ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಮುಖ್ಯ ಭಾಷಣ ಮಾಡಿದರು.

ಹುಬ್ಬಳ್ಳಿ ಅಂಜುಮನ್ ಅಧ್ಯಕ್ಷ ಯೂಸುಫ್ ಸವಣೂರ್, ದಾರವಾಡ ಅಂಜುಮನ್ ಅಧ್ಯಕ್ಷ ಹೆಚ್ ಎಂ ಕೊಪ್ಪದ್, ಕರ್ನಾಟಕ ಮುಸ್ಲಿಂ ಜಮಾಅತ್ ಉಪಾದ್ಯಕ್ಷ ಸೃಫುಲ್ಲಾ ಸಾಹಬ್ ದಾವಣಗೆರೆ, ರಾಜ್ಯ ವಕ್ಫ್ ಸದಸ್ಯ ಯಾಕೂಬ್ ಶಿವಮೊಗ್ಗ, ಕೆ ಸಿ ಎಫ್ ನಾಯಕರಾದ ಹಂಝ ಮೃಂದಾಳ, ಇಸ್ಮಾಯಿಲ್ ಜೋಗಿಬೆಟ್ಟು,
ಇಹ್‌ಸಾನ್ ಕರ್ನಾಟಕ ನಾಯಕರಾದ ಕೆ.ಎಚ್ ಇಸ್ಮಾಯಿಲ್ ಸ‌ಅದಿ ಕಿನ್ಯ, ಅಬ್ದುಲ್ ರಹ್ಮಾನ್ ರಝ್ವಿ‌ ಕಲ್ಕಟ್ಟ, ಬಿ.ಎ.ಇಬ್ರಾಹಿಂ ಸಖಾಫಿ ,ಇಸ್‌ಹಾಖ್ ಝುಹ್ರಿ ದೇರಳಕಟ್ಟೆ, ಅಡ್ವಕೇಟ್ ಇಲ್ಯಾಸ್ ನಾವುಂದ ಮುಂತಾದವರು ಪಾಲ್ಗೊಂಡಿದ್ದರು.

ಇಹ್ಸಾನ್ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್ ಸ್ವಾಗತಿಸಿದರು. ಇಹ್ಸಾನ್ ಟ್ಯೂಟರ್ ಉವೆಯ್ಸ್ ಮಂಝರಿ ಧನ್ಯವಾದ‌ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News