ಸುಂಟಿಕೊಪ್ಪ ರೆಸಾರ್ಟ್‍ನಲ್ಲಿ ಅಕ್ರಮ ಜೂಜಾಟ: 23 ಮಂದಿಯ ಬಂಧನ

Update: 2021-01-17 17:10 GMT

ಮಡಿಕೇರಿ,ಜ.17: ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ರೆಸಾರ್ಟ್‍ವೊಂದರಲ್ಲಿ ಜೂಜಾಟದ ಪ್ರಕರಣವನ್ನು ಬೇಧಿಸಿರುವ ಜಿಲ್ಲಾ ಅಪರಾಧ ಪತ್ತೆ ದಳ ಮಂಡ್ಯ ಮತ್ತು ಮೈಸೂರು ಮೂಲದ 23 ಮಂದಿ ಆರೋಪಿಗಳನ್ನು ಬಂಧಿಸಿದೆ. ಜೂಜಾಟಕ್ಕೆ ಬಳಸಿದ್ದ 6,57,840 ರೂ.ನಗದು, ಹಾಗೂ 4 ಐಷಾರಾಮಿ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೂಜುಕೋರರ ವಿರುದ್ಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ ಮತ್ತು ಮೈಸೂರು ಮೂಲದ ಆರೋಪಿಗಳಾದ ಬಸವರಾಜು, ಆನಂದ ಎಂ.ಆರ್, ವಿನಯ್ ಕುಮಾರ್, ದೀಕ್ಷಿತ್, ಲೋಕೇಶ್, ಕೃಷ್ಣೇಗೌಡ, ಎಸ್.ಕುಮಾರ್, ಆನಂದ, ರವಿ, ವಿಜೇಂದ್ರ, ಟಿ.ಸಿ. ಸತೀಶ್, ಕುಮಾರ್, ಮಹೇಶ್ ಟಿ.ಸಿ, ವಿ. ವಿನಯ್, ನವೀನ್, ಮಂಜು, ನಾಗರಾಜು, ಮಂಜುನಾಥ್, ಟಿ.ಎಸ್. ಚಂದ್ರ, ಸಂತೋಷ್, ರವಿ ಕುಮಾರ್, ಮಂಜು, ಕುಮಾರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲದೇ, ಜೂಜಾಟಕ್ಕಾಗಿ ರೆಸಾರ್ಟ್‍ಗೆ ಬರಲು ಬಳಸಿದ್ದ ಕಾರುಗಳು, 23 ಮೊಬೈಲ್ ಫೋನ್‍ಗಳು ಹಾಗೂ ಇಸ್ಪೀಟ್ ಕಾರ್ಡ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಹಾಗೂ ಸುಂಟಿಕೊಪ್ಪ ಪೊಲೀಸರು ಇಂದು ದಾಳಿ ನಡೆಸಿದ ಸಂದರ್ಭ ಕೋಣೆಯೊಂದರಲ್ಲಿ ಲಕ್ಷಾಂತರ ರೂ. ನಗದನ್ನು ಪಣಕ್ಕಿಟ್ಟು ಜೂಜಾಡುತ್ತಿದ್ದ ದೃಶ್ಯ ಕಂಡು ಬಂದಿದೆ. ಅಲ್ಲದೆ ಜೂಜುಕೋರರು ರೆಸಾರ್ಟ್‍ನಲ್ಲಿ ತಾವೇ ಅಡುಗೆ ಮಾಡಿ ಮೋಜು, ಮಸ್ತಿಯಲ್ಲಿ ತೊಡಗಿದ್ದ ಬಗ್ಗೆಯೂ ಮಾಹಿತಿ ಲಭಿಸಿದೆ. 

ಎಲ್ಲಾ 23 ಆರೋಪಿಗಳ ವಿರುದ್ಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ವಿಭಾಗದ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ಸಿಬ್ಬಂದಿಗಳಾದ ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಆರ್. ವಸಂತ, ವಿ.ಜೆ. ವೆಂಕಟೇಶ್, ಕೆ.ಎಸ್. ಅನಿಲ್ ಕುಮಾರ್, ಯು.ಎ.ಮಹೇಶ್, ಬಿ.ಜೆ. ಶರತ್ ರೈ, ಚಾಲಕ ಶಿವ ಕುಮಾರ್, ಸುಂಟಿಕೊಪ್ಪ ಠಾಣಾಧಿಕಾರಿ ಕಾವೇರಪ್ಪ, ಸಿಬ್ಬಂದಿಗಳಾದ ಸತೀಶ್, ಪುನೀತ್, ಸಂಪತ್ ಅವರುಗಳು ಕಾರ್ಯಾಚರಣೆ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News