ಪ್ರೆಸ್‍ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಅಝೀಂ ಪ್ರೇಮ್‍ಜಿ, ವಿಶೇಷ ಪ್ರಶಸ್ತಿಗೆ ಡಾ.ದೇವಿಪ್ರಸಾದ್ ಶೆಟ್ಟಿ ಆಯ್ಕೆ

Update: 2021-01-18 12:58 GMT
ಅಝೀಂ ಪ್ರೇಮ್‍ಜಿ, ಡಾ.ದೇವಿಪ್ರಸಾದ್ ಶೆಟ್ಟಿ, ಸುದೀಪ್

ಬೆಂಗಳೂರು, ಜ.18: ಬೆಂಗಳೂರು ಪ್ರೆಸ್‍ಕ್ಲಬ್ ವತಿಯಿಂದ ಕೊಡಮಾಡುವ 2020ನೇ ಸಾಲಿನ ಪ್ರೆಸ್‍ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಅಝೀಂ ಪ್ರೇಮ್‍ಜಿ ಆಯ್ಕೆಯಾಗಿದ್ದಾರೆ ಎಂದು ಪ್ರೆಸ್‍ಕ್ಲಬ್ ಅಧ್ಯಕ್ಷ ಕೆ.ಸದಾಶಿವ ಶೆಣೈ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರೆಸ್‍ಕ್ಲಬ್ ಸದಸ್ಯರು ಮತದಾನದ ಮೂಲಕ ಅಝೀಂ ಪ್ರೇಮ್‍ಜಿ ಅವರನ್ನು ಪ್ರೆಸ್‍ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಹಾಗೆಯೇ ಪ್ರೆಸ್‍ಕ್ಲಬ್ ವಿಶೇಷ ಪ್ರಶಸ್ತಿಗೆ ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್ ಶೆಟ್ಟಿ ಮತ್ತು ಚಿತ್ರನಟ ಸುದೀಪ್ ಅವರನ್ನು ಪ್ರೆಸ್‍ಕ್ಲಬ್‍ನ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಫೆಬ್ರವರಿ ಮೂರನೇ ವಾರ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಿದ್ದಾರೆಂದು ಅವರು ಮಾಹಿತಿ ನೀಡಿದ್ದಾರೆ.

ವಾರ್ಷಿಕ ಪ್ರಶಸ್ತಿ ಪಟ್ಟಿ

ಪ್ರೆಸ್‍ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ದೇವನಾಥ್ ಎಸ್., ಎಸ್.ಕೆ.ಶೇಷಚಂದ್ರಿಕ, ಪಿ.ರಾಮಕೃಷ್ಣ ಉಪಾಧ್ಯ, ಜಿ.ಎಸ್.ನಾರಾಯಣರಾವ್ (ಜೆಸುನಾ), ಎಚ್.ಬಿ.ದಿನೇಶ್, ಡಾ.ಸಿ.ಎಸ್.ದ್ವಾರಕಾನಾಥ್, ಮುಂಜಾನೆ ಸತ್ಯ, ಗೇಬ್ರಿಯಲ್ ವಾಝ್, ಸಾಗ್ಗೆರೆ ರಾಮಸ್ವಾಮಿ, ಶಾಂತಲಾ ಧರ್ಮರಾಜ್, ಉದಯ ಮರಕಿಣಿ, ಎಸ್.ಕೆ.ಶ್ಯಾಂಸುಂದರ್, ಎಂ.ಸಿ.ಪಾಟೀಲ್.

ಆರ್.ಶ್ರೀಧರ್(ಉದಯ ಟಿವಿ), ಇಂದ್ರಜಿತ್ ಲಂಕೇಶ್, ವೈ.ಗ.ಜಗದೀಶ್, ಮನು ಅಯ್ಯಪ್ಪ, ಎಸ್.ಲಕ್ಷ್ಮಿನಾರಾಯಣ, ಪರಮೇಶ್ವರ್ ಗುಂಡ್ಕಲ್, ರಾಘವೇಂದ್ರ ಹುಣಸೂರು, ಆದಿನಾರಾಯಣ ಮೂರ್ತಿ, ವಿಶ್ವನಾಥ್ ಸುವರ್ಣ, ಸುಧಾಕರ್ ದರ್ಬೆ, ಡಾ.ಎಂ.ಎಸ್.ಮಣಿ ಹಾಗೂ ಆರ್.ಎಚ್.ನಟರಾಜ್ ಸೇರಿದಂತೆ ಒಟ್ಟು 25 ಮಂದಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News