ಮೋದಿ, ಆದಿತ್ಯನಾಥ್‌ ಕುರಿತು ನಿಂದನಾತ್ಮಕ ಫೇಸ್‌ ಬುಕ್‌ ಪೋಸ್ಟ್:‌ ಕಾನೂನು ವಿದ್ಯಾರ್ಥಿಯ ಬಂಧನ

Update: 2021-01-19 07:33 GMT

ಲಕ್ನೋ,ಜ.19: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನಿಂದನಾತ್ಮಕ ಪೋಸ್ಟ್ ಮಾಡಿದ ಆರೋಪದ ಮೇಲೆ ಗೋರಖಪುರ್‍ನಿಂದ 24 ವರ್ಷದ ಕಾನೂನು ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವಿದ್ಯಾರ್ಥಿ ಅರುಣ್ ಯಾದವ್ ಎಂಬಾತನ ವಿರುದ್ಧ ಐಟಿ ಕಾಯಿದೆ ಹಾಗೂ ಐಪಿಸಿ ಸೆಕ್ಷನ್ 153 ಎ ಹಾಗೂ 469 ಅನ್ವಯ ಪ್ರಕರಣ ದಾಖಲಿಸಲಾಗಿದೆ. ವೀಡಿಯೋವೊಂದರಲ್ಲಿ ಮೋದಿ ಹಾಗೂ ಆದಿತ್ಯನಾಥ್ ಮುಖಗಳನ್ನು ಮಾರ್ಫ್ ಮಾಡಿ ಅದನ್ನು ಫೇಸ್ ಬುಕ್‍ನಲ್ಲಿ  ಆರೋಪಿ ಯುವಕ ಪೋಸ್ಟ್ ಮಾಡಿದ್ದ. ಆತನನ್ನು ಗೋರಖಪುರ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಈಗ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ವಿದ್ಯಾರ್ಥಿಯ ಬಂಧನದ ಬೆನ್ನಲ್ಲೇ ಗೋರಖಪುರ್ ವಿಶ್ವವಿದ್ಯಾಲಯ ಆತನನ್ನು ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸಿದೆ. ಆತ  ಕ್ಯಾಂಪಸ್ ಒಳಗೆ ಪ್ರವೇಶಿಸುವಂತಿಲ್ಲ ಎಂದು ವಿವಿ ಹೇಳಿದ್ದು ಸಂಸ್ಥೆಯ ಶಿಸ್ತು ಸಮಿತಿ ಆತನ ವಿರುದ್ಧದ ಆರೋಪದ ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News