ಕೋವಿಡ್ ಲಸಿಕೆ ಕುರಿತು ಭಯಬೇಡ: ಸಚಿವ ಡಾ.ಕೆ.ಸುಧಾಕರ್

Update: 2021-01-19 13:34 GMT

ಬೆಂಗಳೂರು, ಜ.19: ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂಜರಿಕೆ ಇದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಇಡೀ ದೇಶದಲ್ಲಿ ನಿನ್ನೆ ಅತಿ ಹೆಚ್ಚು ಜನರು ನಮ್ಮ ರಾಜ್ಯದಲ್ಲಿ ಲಸಿಕೆ ಪಡೆದಿದ್ದಾರೆ. ಲಸಿಕೆಗಳು ಸುರಕ್ಷಿತವಾಗಿದ್ದು ರಾಜ್ಯದಲ್ಲಿ ಲಸಿಕೆ ಪ್ರಯೋಗ ಯಶಸ್ವಿಯಾಗಿ ನಡೆದಿದೆ.

ವದಂತಿಗಳನ್ನು ನಂಬಬೇಡಿ. ಲಸಿಕೆ ಕುರಿತು ಯಾವುದೇ ಭಯ ಬೇಡ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಆಂಧ್ರಪ್ರದೇಶದಲ್ಲಿ 9758, ಅರುಣಾಚಲ ಪ್ರದೇಶದಲ್ಲಿ 1054, ಅಸ್ಸಾಂ ರಾಜ್ಯದಲ್ಲಿ 1822, ಬಿಹಾರದಲ್ಲಿ 8656, ಛತ್ತೀಸ್‍ಗಡದಲ್ಲಿ 4459, ದಿಲ್ಲಿಯಲ್ಲಿ 3111, ಹರಿಯಾಣದಲ್ಲಿ 3486, ಹಿಮಾಚಲ ಪ್ರದೇಶದಲ್ಲಿ 2914, ಜಮ್ಮು ಮತ್ತು ಕಾಶ್ಮೀರದಲ್ಲಿ 1139, ಜಾರ್ಖಂಡ್‍ನಲ್ಲಿ 2687, ಕರ್ನಾಟಕದಲ್ಲಿ 36,888, ಕೇರಳದಲ್ಲಿ 7070, ಲಕ್ಷದ್ವೀಪದಲ್ಲಿ 180, ಮಧ್ಯಪ್ರದೇಶದಲ್ಲಿ 6665, ಮಣಿಪುರದಲ್ಲಿ 291, ಮಿಝೋರಾಂನಲ್ಲಿ 220, ನಾಗಾಲ್ಯಾಂಡ್‍ನಲ್ಲಿ 864, ಓಡಿಶಾದಲ್ಲಿ 22,579 ಹಾಗೂ ಪುದುಚೇರಿಯಲ್ಲಿ 183 ಮಂದಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News