ರಾಜ್ಯದಲ್ಲಿ 645 ಹೊಸ ಕೊರೋನ ಪ್ರಕರಣ ದೃಢ, 6 ಜನರ ಸಾವು

Update: 2021-01-19 16:35 GMT

ಬೆಂಗಳೂರು, ಜ.19: ರಾಜ್ಯದಲ್ಲಿ ಮಂಗಳವಾರ 645 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 6 ಜನರು ಸೋಂಕಿಗೆ ಬಲಿಯಾಗಿದ್ದು, 807 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 9,33,077ಕ್ಕೆ ತಲುಪಿದ್ದು, 172 ಜನ ಸೋಂಕಿತರು ಐಸಿಯುನಲ್ಲಿದ್ದಾರೆ. 

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 12,181ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 7,865ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

6 ಸೋಂಕಿತರು ಬಲಿ: ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 4, ಮಂಡ್ಯ  ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 645 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 3, ಬಳ್ಳಾರಿ 2, ಬೆಳಗಾವಿ 18, ಬೆಂಗಳೂರು ಗ್ರಾಮಾಂತರ 18, ಬೆಂಗಳೂರು ನಗರ 357, ಬೀದರ್ 6, ಚಾಮರಾಜನಗರ 2, ಚಿಕ್ಕಬಳ್ಳಾಪುರ 36, ಚಿಕ್ಕಮಗಳೂರು 2, ಚಿತ್ರದುರ್ಗ 16, ದಕ್ಷಿಣ ಕನ್ನಡ 25, ದಾವಣಗೆರೆ 5, ಧಾರವಾಡ 8, ಹಾಸನ 10, ಕಲಬುರಗಿ 8, ಕೊಡಗು 6, ಕೋಲಾರ 8, ಮಂಡ್ಯ 15, ಮೈಸೂರು 34, ರಾಯಚೂರು 7, ರಾಮನಗರ 2, ಶಿವಮೊಗ್ಗ 17, ತುಮಕೂರು 11, ಉಡುಪಿ 4, ಉತ್ತರ ಕನ್ನಡ 17, ವಿಜಯಪುರ 2, ಯಾದಗಿರಿ ಜಿಲ್ಲೆಯಲ್ಲಿ 2 ಪ್ರಕರಣ ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News