ಶಾಲೆಗಳಿಗೆ ಹೋಗಲು ವಿದ್ಯಾರ್ಥಿಗಳು ಉತ್ಸುಕ: ಬ್ರೈನ್ಲಿ ಸಮೀಕ್ಷೆ

Update: 2021-01-19 16:53 GMT

ಬೆಂಗಳೂರು, ಜ.19: ಕೋವಿಡ್ ಲಾಕ್‍ಡೌನ್‍ನಿಂದಾಗಿ ಬಂದ್ ಆಗಿದ್ದ ಶಾಲೆಗಳು ಪುನಃ ಆರಂಭವಾಗಿರುವುದನ್ನು ವಿದ್ಯಾರ್ಥಿಗಳು ಸ್ವಾಗತಿಸಿದ್ದು, ಶಾಲೆಗೆ ಹೋಗಲು ಉತ್ಸುಕರಾಗಿದ್ದಾರೆಂದು ಸಮೀಕ್ಷೆ ಮೂಲಕ ತಿಳಿದುಬಂದಿದೆ ಎಂದು ಬ್ರೈನ್ಲಿಯ ಸಿಪಿಒ ರಾಜೇಶ್ ಬಿಸಾನಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಲಾಕ್‍ಡೌನ್ ಸಂದರ್ಭ, ಆನ್‍ಲೈನ್ ಕ್ಲಾಸ್ ಹಾಗೂ ಆ ನಂತರದ ಶಾಲೆಗಳ ಆರಂಭದ ಕುರಿತು ಬ್ರೈನ್ಲಿ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ ಹಲವು ವಿದ್ಯಾರ್ಥಿಗಳು ಶಾಲೆಗಳು ಆರಂಭವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆಂದು ತಿಳಿಸಿದ್ದಾರೆ.

ಲಾಕ್‍ಡೌನ್ ಸಮಯದಲ್ಲಿ ಶೇ.19.8 ವಿದ್ಯಾರ್ಥಿಗಳು ಆನ್‍ಲೈನ್ ಕಲಿಕೆಗಾಗಿ ಲ್ಯಾಪ್‍ಟಾಪ್, ಸ್ಮಾರ್ಟ್‍ಫೋನ್, ಟ್ಯಾಬ್ ಸೇರಿದಂತೆ ಹಲವು ಕಲಿಕಾ ಸಾಧನಗಳನ್ನು ಖರೀದಿಸಿದ್ದಾರೆ. ಶೇ.28.7 ವಿದ್ಯಾರ್ಥಿಗಳು ಕಲಿಕೆಗಾಗಿ ಪೋಷಕರಿಂದ ಹೆಚ್ಚಿನ ಸಹಾಯ ಪಡೆದಿದ್ದಾರೆ. ಹಾಗೂ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹೆಚ್ಚಿನ ಉತ್ಸುಕತೆ ತೋರಿದ್ದಾರೆಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News