ವಕೀಲರ ಡ್ರೆಸ್‍ಕೋಡ್‍ಗಿದ್ದ ವಿನಾಯಿತಿ ರದ್ದು: ಫೆ.1ರಿಂದ ಕಪ್ಪು ಕೋಟ್ ಧರಿಸುವಿಕೆ ಕಡ್ಡಾಯ

Update: 2021-01-19 17:10 GMT

ಬೆಂಗಳೂರು, ಜ.19: ಲಾಕ್‍ಡೌನ್ ಜಾರಿಯಿಂದಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ವಕೀಲರಿಗೆ ನೀಡಿದ್ದ ಡ್ರೆಸ್ ಕೋಡ್ ವಿನಾಯಿತಿಯನ್ನು ರದ್ದುಗೊಳಿಲಾಗಿದೆ. ಫೆ.1ರಿಂದ ವಕೀಲರು ಕಪ್ಪು ಕೋಟ್ ಧರಿಸಿಯೇ ಕೋರ್ಟ್‍ಗೆ ಹಾಜರಾಗಬೇಕೆಂದು ಹೈಕೋರ್ಟ್ ಸಿಜೆ ಆದೇಶದಂತೆ ರಿಜಿಸ್ಟ್ರಾರ್ ಜನರಲ್ ಪ್ರಕಟಣೆ ಹೊರಡಿಸಿದ್ದಾರೆ. 

ಜೊತೆಗೆ ಹೈಕೋರ್ಟ್ ಆವರಣಕ್ಕೆ ವಕೀಲರ ವಾಹನ ನಿಲ್ಲಿಸಲು ಮತ್ತು ಶೇ.50 ಕುರ್ಚಿಗಳೊಂದಿಗೆ ಕ್ಯಾಂಟೀನ್ ಬಳಕೆಗೂ ಅನುಮತಿ ನೀಡಲಾಗಿದೆ. ಕೋರ್ಟ್ ಆವರಣದಲ್ಲಿ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ವಕೀಲರು ಕಪ್ಪು ಕೋಟ್, ಗೌನ್, ಬ್ಯಾಂಡ್ ಧರಿಸಿಯೇ ಕೋರ್ಟ್‍ಗೆ ಹಾಜರಾಗಬೇಕು.

ಕೊರೋನ ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ವಕೀಲರು ಬಿಳಿ ಶರ್ಟ್, ಸಲ್ವಾರ್ ಕಮೀಜ್, ಮಹಿಳಾ ವಕೀಲರು ಬಿಳಿಸೀರೆ, ಕುತ್ತಿಗೆಗೆ ನೆಕ್ ಬ್ಯಾಂಡ್ ಧರಿಸಬಹುದು, ಕಪ್ಪು ಕೋಟ್‍ನ್ನು ಮುಂದಿನ ಆದೇಶದವರೆಗೆ ಬಳಸುವುದು ಬೇಡ ಎಂದು ಕಳೆದ ಮೇ ತಿಂಗಳಿನಲ್ಲೇ ವಸ್ತ್ರ ಸಂಹಿತೆ ಜಾರಿ ಮಾಡಿ ಸುತ್ತೋಲೆ ಹೊರಡಿಸಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News