ಕಲ್ಲಗಂಗೂರು ಕಲ್ಲು ಕ್ವಾರೆಯಲ್ಲಿ ಸ್ಫೋಟ ಪ್ರಕರಣ: ಏಳು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು

Update: 2021-01-22 14:43 GMT

ಶಿವಮೊಗ್ಗ, ಜ.22: ಕಲ್ಲಗಂಗೂರು ಕಲ್ಲು ಕ್ವಾರೆಯಲ್ಲಿ ಸ್ಫೋಟ ಸಂಭವಿಸಿದ ಪ್ರಕರಣ ಸಂಬಂಧ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಸೇರಿ ಏಳು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. 

ಸ್ಥಳೀಯರಾದ ಸಂದೀಪ್ ಎಂಬವರು ಈ ದೂರು ಸಲ್ಲಿಸಿದ್ದಾರೆ. ನಿಯಮ ಬಾಹಿರವಾಗಿ ಕಲ್ಲು ಕ್ವಾರೆ, ಕ್ರಷರ್ ನಡೆಸುತ್ತಿರುವ ಸಂಬಂಧ ಸಂದೀಪ್ ಅವರು 2013ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದ್ದು, ಜನವರಿ 29ಕ್ಕೆ ಅಂತಿಮ ವಿಚಾರಣೆಗೆ ದಿನಾಂಕ ನಿಗದಿಯಾಗಿತ್ತು.

ಕಲ್ಲಗಂಗೂರಿನಲ್ಲಿ ಸ್ಫೋಟ ಸಂಭವಿಸುತ್ತಿದ್ದಂತೆ ಏಳು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. 2013ರ ಪ್ರಕರಣಕ್ಕೆ ಇವರ ಹೆಸರನ್ನು ಸೇರಿಸಿಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಯಾರ ವಿರುದ್ಧ ಕೇಸ್ ?

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ತಹಶೀಲ್ದಾರ್ ನಾಗರಾಜ್, ಪರಿಸರ ಅಧಿಕಾರಿ ಹರಿಶಂಕರ್, ಹಿರಿಯ ಭೂ ವಿಜ್ಞಾನಿ ರಾಂಜಿ ನಾಯ್ಕ, ಭೂ ವಿಜ್ಞಾನಿ ಜ್ಯೋತಿ, ಉಪಪರಿಸರ ಅಧಿಕಾರಿ ಶಿಲ್ಪಾ ಅವರ ವಿರುದ್ಧ ದೂರು ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News