‘ಕೋವ್ಯಾಕ್ಸ್’ ಮೂಲಕ ಬಡ ದೇಶಗಳಿಗೆ 4 ಕೋಟಿ ಡೋಸ್: ಫೈಝರ್

Update: 2021-01-23 16:37 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜ. 13: ವಿಶ್ವ ಆರೋಗ್ಯ ಸಂಸ್ಥೆಯ ‘ಕೋವ್ಯಾಕ್ಸ್’ ಕಾರ್ಯಕ್ರಮದ ಮೂಲಕ ಬಡ ದೇಶಗಳಿಗೆ ಲಾಭರಹಿತವಾಗಿ 4 ಕೋಟಿ ಕೊರೋನ ವೈರಸ್ ಲಸಿಕೆಯ ಡೋಸ್‌ಗಳನ್ನು ಒದಗಿಸುವುದಾಗಿ ಅಮೆರಿಕದ ಔಷಧ ತಯಾರಿಕಾ ಕಂಪೆನಿ ಫೈಝರ್ ಶುಕ್ರವಾರ ಘೋಷಿಸಿದೆ.

ಜಗತ್ತಿನ ಡಝನ್‌ಗಟ್ಟಲೆ ಶ್ರೀಮಂತ ದೇಶಗಳು ಈಗಾಗಲೇ ತಮ್ಮ ಕೊರೋನ ಲಸಿಕೆ ಅಭಿಯಾನವನ್ನು ಆರಂಭಿಸಿವೆಯಾದರೂ, ಬಡ ದೇಶಗಳಿಗೆ ಲಸಿಕೆಗಳು ಇನ್ನೂ ತಲುಪಿಲ್ಲ.

ಕಡಿಮೆ ವರಮಾನದ ದೇಶಗಳಿಗೂ ಕೊರೋನ ವೈರಸ್ ಲಸಿಕೆಯ ಸಮಾನ ವಿತರಣೆಗಾಗಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಆರಂಭಿಸಲಾಗಿರುವ ಕೋವ್ಯಾಕ್ಸ್ ಕಾರ್ಯಕ್ರಮವು, ಫೆಬ್ರವರಿಯಿಂದ ಲಸಿಕೆಗಳನ್ನು ಪೂರೈಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News