ಈ ಬಾರಿ ಗಣರಾಜ್ಯೋತ್ಸಕ್ಕೆ ಕರ್ನಾಟಕದಿಂದ ವಿಜಯನಗರ ಸಾಮ್ರಾಜ್ಯದ ಸ್ತಬ್ಧಚಿತ್ರ

Update: 2021-01-24 16:13 GMT

ಹೊಸದಿಲ್ಲಿ, ಜ.24: ಜನವರಿ 26ರಂದು ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಕರ್ನಾಟಕದ ವತಿಯಿಂದ ವಿಜಯನಗರ ಸಾಮ್ರಾಜ್ಯವನ್ನು ಪ್ರತಿನಿಧಿಸುವ ಸ್ತಬ್ಧಚಿತ್ರ ಪ್ರದರ್ಶಿಸಲಾಗುತ್ತದೆ.

ಹಂಪಿಯ ಮುಖ್ಯ ದೇವರಾದ ಉಗ್ರ ನರಸಿಂಹ, ಅದರ ಹಿಂಭಾಗದಲ್ಲಿ ಅಂಜನಾದ್ರಿ ಬೆಟ್ಟ, ಪಕ್ಕದಲ್ಲಿ ಸಾಮ್ರಾಟ ಕೃಷ್ಣದೇವರಾಯನ ಪಟ್ಟಾಭಿಷೇಕ ಸಮಾರಂಭದ ದೃಶ್ಯಗಳನ್ನೊಳಗೊಂಡ ಸ್ತಬ್ಧಚಿತ್ರ ನಿರ್ಮಿಸಲಾಗಿದೆ.

ಪ್ರತಿವರ್ಷ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಸುಮಾರು 30 ಕಲಾವಿದರು ಭಾಗವಹಿಸಲು ಅವಕಾಶವಿತ್ತು. ಆದರೆ, ಈ ಬಾರಿ ಕೊರೋನ ನಿಯಮಾವಳಿಗಳ ಕಾರಣ ಕೇವಲ 12 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಶಿವಮೊಗ್ಗ ರಂಗಾಯಣದ 12 ವೃತ್ತಿಪರ ಕಲಾವಿದರು ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಕಲಾವಿದ ಶಶಿಧರ ಅಡಪ ಅವರ ನೇತೃತ್ವದಲ್ಲಿ ಸ್ತಬ್ಧಚಿತ್ರ ಮೂಡಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News