×
Ad

ಹೆಣ್ಣು ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ: ಸಿಎಂ ಯಡಿಯೂರಪ್ಪ

Update: 2021-01-24 21:45 IST

ಬೆಂಗಳೂರು, ಜ. 24: `ಹೆಣ್ಣುಮಕ್ಕಳ ಪ್ರತಿಭೆಯನ್ನು ಗುರುತಿಸಿ, ಸಾಧನೆಗೆ ಸಮಾನ ಅವಕಾಶ ಕಲ್ಪಿಸುವ ನಮ್ಮ ಶ್ರೇಷ್ಠ ಸಂಸ್ಕೃತಿ, ಮಾನವ ಧರ್ಮವನ್ನು ಎತ್ತಿ ಹಿಡಿಯೋಣ. ಹೆಣ್ಣುಮಕ್ಕಳಿಗೆ ಶಿಕ್ಷಣ, ರಕ್ಷಣೆ, ತಾರತಮ್ಯ ರಹಿತ ಬಲಿಷ್ಠ ಸಮಾಜವನ್ನು ಕಟ್ಟುವ ದೃಢ ಸಂಕಲ್ಪ ಮಾಡೋಣ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಮನವಿ ಮಾಡಿದ್ದಾರೆ.

ರವಿವಾರ ಹೆಣ್ಣು ಮಕ್ಕಳ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು, `ಹೆಣ್ಣು ಮಗುವಿಗೂ ಸಮಾನ ಅವಕಾಶ, ಪ್ರೋತ್ಸಾಹ ಮತ್ತು ರಕ್ಷಣೆಯಿರುವ ಸದೃಢ ಸಮಾಜ ನಿರ್ಮಾಣ ನಮ್ಮೆಲ್ಲದ ಹೊಣೆಯಾಗಿದೆ' ಎಂದು ಇದೇ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News