ರೈತರ ‘ಗಣರಾಜ್ಯೋತ್ಸವ ಪೆರೇಡ್'ಗೆ ಭೀಮಾ ಕೋರೆಗಾಂವ್ ಹೋರಾಟ ಸಮಿತಿ ಬೆಂಬಲ

Update: 2021-01-25 14:30 GMT

ಬೆಂಗಳೂರು, ಜ. 25: ಕೃಷ್ಟಿ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ ನಾಳೆ(ಜ.26) ರೈತರು ನಡೆಸುತ್ತಿರುವ ‘ಗಣರಾಜ್ಯೋತ್ಸವ ಪೆರೇಡ್' ಮತ್ತು ರೈತರ ಚಾರಿತ್ರಿಕ ಪ್ರತಿಭಟನೆಗೆ ಭೀಮಾ ಕೋರೆಗಾಂವ್ ಹೋರಾಟ ಸಮಿತಿ ತನ್ನ ಬೆಂಬಲ ವ್ಯಕ್ತಪಡಿಸಿದ್ದು, ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಸಮಿತಿ ಪ್ರತಿಭಟನೆಯಲ್ಲಿ ಭಾಗವಹಿಸಲಿದೆ ಎಂದು ತಿಳಿಸಿದೆ.

ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ರೈತ ವಿರೋಧಿ ಕಾಯ್ದೆಗಳು ಭಾರತದ ಮರಣ ಶಾಸಕರು ಎಂಬುದು ಅರ್ಥವಾಗುತ್ತದೆ. ಹೀಗಾಗಿಯೇ ದೇಶದ ಜನತೆ ರೈತರನ್ನು ಬೆಂಬಲಿಸಿದ್ದು, ದಲಿತರು ಮತ್ತು ಕಾರ್ಮಿಕರು ಸೇರಿದಂತೆ ಎಲ್ಲರೂ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸುತ್ತಿದ್ದಾರೆ.

ಕಾಯ್ದೆಗಳ ತಿದ್ದುಪಡಿ ಮೂಲಕ ಫ್ಯಾಸಿಸ್ಟ್, ಹೊಸ ಸಾಮ್ರಾಜ್ಯವಾದವನ್ನು ತಳಮಟ್ಟದಿಂದ ಕಟ್ಟುವ ಉಮೇದಿನಲ್ಲಿ ಕೇಂದ್ರ ಸರಕಾರವಿದೆ. ಹೀಗಾಗಿ ನಮ್ಮೆಲ್ಲರ ಮೇಲೆ ದೌರ್ಜನ್ಯಗಳಿಗೆ ಸಂವಿಧಾನದಿಂದಲೂ ನ್ಯಾಯ ಸಿಗದಂತಹ ಸ್ಥಿತಿ ಉಂಟಾಗಿದೆ. ಹೀಗಾಗಿ ದಲಿತ, ರೈತ, ಕಾರ್ಮಿರು ಸೇರಿದಂತೆ ಎಲ್ಲರೂ ಒಗ್ಗೂಡಬೇಕಿದೆ ಎಂದು ಸಮಿತಿ ಪ್ರಕಟಣೆ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News