×
Ad

ಎಫ್‍ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಮತ್ತಿಬ್ಬರ ಬಂಧನ, ಒಟ್ಟು 82 ಲಕ್ಷ ನಗದು ಜಪ್ತಿ

Update: 2021-01-25 21:53 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.26: ಎಫ್‍ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಮತ್ತಿಬ್ಬರನ್ನು ಬಂಧಿಸಿ, ಒಟ್ಟು 82 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಯಲ್ಲಿರುವ ರಮೇಶ್, ಪರೀಕ್ಷಾ ವಿಭಾಗದಲ್ಲಿ ಶೀಘ್ರ ಲಿಪಿಗಾರರಾಗಿರುವ ಸನಾಬೇಡಿ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ ಎಂದು ಸಿಸಿಬಿ ತಿಳಿಸಿದೆ.

ಸನಾಬೇಡಿ ಪರೀಕ್ಷಾ ವಿಭಾಗದ ನಿಯಂತ್ರಕರಾಗಿದ್ದು, ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿ ರಮೇಶ್‍ಗೆ ನೀಡಿದ್ದಾರೆ. ತದನಂತರ, ಈತ ಚಂದ್ರು ಸೇರಿದಂತೆ ಇತರ ಆರೋಪಿಗಳಿಗೆ ಹಂಚಿಕೆ ಮಾಡಿದ್ದಾನೆ. ಸದ್ಯ ಈ ಇಬ್ಬರಿಂದಲೇ 46 ಲಕ್ಷ ರೂ. ಜಪ್ತಿ ಮಾಡಲಾಗಿದ್ದು, ಇದುವರೆಗೂ ಒಟ್ಟು 82 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.

ಕಳೆದ ಎರಡು ದಿನಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆಯ ಜಾಲದ ಬೆನ್ನು ಹತ್ತಿರುವ ಸಿಸಿಬಿ ಪೊಲೀಸರು ಈವರೆಗೂ 16 ಮಂದಿಯನ್ನು ಬಂಧಿಸಿದ್ದು, ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News