×
Ad

ಲಂಚ ಪಡೆದ ಆರೋಪ: ಜೈಲು ಅಧಿಕಾರಿ ಎಸಿಬಿ ಬಲೆಗೆ

Update: 2021-01-26 22:37 IST

ಬೀದರ್, ಜ.26: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೈದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆ ಕರೆದುಕೊಂಡು ಹೋಗಲು 90 ಸಾವಿರ ರೂ. ಲಂಚ ಪಡೆದ ಆರೋಪದಡಿ ಬೀದರ್ ಜೈಲು ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬೀದರ್ ಜಿಲ್ಲಾ ಕೇಂದ್ರ ಕಾರಾಗೃಹದ ಜೈಲು ಅಧಿಕಾರಿ ಬಸವರಾಜ್ ಎಂಬಾತ, ಆದರ್ಶ ಎಂಬ ವ್ಯಕ್ತಿಯಿಂದ 90 ಸಾವಿರ ರೂಪಾಯಿ ಲಂಚ ಪಡೆಯುವಾಗ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಜೈಲಿನಲ್ಲಿ ಕೈದಿಯಾಗಿರುವ ರೇವಣ್ಣ ಸಿದ್ದಯ್ಯ ಎಂಬಾತನನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆ ಕರೆದುಕೊಂಡು ಹೋಗಲು ಕೈದಿಯ ಸಂಬಂಧಿಕ ಆದರ್ಶ, ಜೈಲು ಸಹಾಯಕ ಬಸವರಾಜ್‍ರನ್ನ ಕೇಳಿಕೊಂಡಾಗ 1 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಮಾಡಿದ್ದರು. ಇದಾದ ಬಳಿಕ, 90 ಸಾವಿರ ಹಣ ನೀಡುವಾಗ ಎಸಿಬಿ ಎಸ್ಪಿ ಮಹೇಶ ಮೇಗನವರ್ ನೇತೃತ್ವದ ತಂಡದಿಂದ ದಾಳಿ ನಡೆಸಿದಾಗ ಜೈಲು ಅಧಿಕಾರಿ ಸಿಕ್ಕಿಬಿದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News