ಬಗರ್‍ಹುಕುಂ ಸಾಗುವಳಿ ಜಮೀನು ವಿಲೇವಾರಿಗೆ ಸಮಿತಿ ನಿರ್ಲಕ್ಷ್ಯ: ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಆರೋಪ

Update: 2021-01-27 18:21 GMT

ಚಿಕ್ಕಮಗಳೂರು, ಜ.27: ಬಗರ್‍ಹುಕ್ಕುಂ ಸಮಿತಿ ವಿಲೇ ಮಾಡಿರುವ ಮತ್ತು ಟಿ.ಟಿ.ದಂಡ ಕಟ್ಟಿರುವ ಅರ್ಜಿಗಳನ್ನು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಇತ್ಯರ್ಥಪಡಿಸಿ ಸಾಗುವಳಿ ಚೀಟಿಗೆ ಕಾಯುತ್ತಿರುವ ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಜಿಲ್ಲಾಧ್ಯಕ್ಷ ನೀಲನಹಳ್ಳಿ ಹೆಗ್ಗಪ್ಪ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಬಗರ್‍ಹುಕ್ಕುಂ ಸಕ್ರಮೀಕರಣ ಸಮಿತಿ ರಚಿಸಲಾಗಿದೆ. ಆದರೆ, ಈ ಸಮಿತಿಗಳು ಸಕಾಲಕ್ಕೆ ಸಭೆಯನ್ನು ನಡೆಸುತ್ತಿಲ್ಲ, ಸಭೆ ನಡೆಸಿರುವ ಕೆಲವು ಸಮಿತಿ ಅರ್ಜಿಗಳ ಮಂಜೂರಾತಿ ನೀಡುತ್ತಿದೆ. ರೈತರಿಗೆ ಸಾಗುವಳಿ ಚೀಟಿ ನೀಡುತ್ತಿಲ್ಲ ಎಂದ ಅವರು ಬಗರ್‍ಹುಕ್ಕುಂ ಸಕ್ರಮೀಕರಣ ಸಮಿತಿ ಪ್ರತೀ ಶನಿವಾರ ಸಭೆನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಆಗ್ರಹಿಸಿದರು. 

ಜಿಲ್ಲಾದ್ಯಂತ ಇರುವ ಗೋಮಾಳ ಮತ್ತು ಅರಣ್ಯ ಭೂಮಿ ಗೊಂದಲಗಳಿಗೆ ಸರಕಾರ ಸೂಕ್ತಪರಿಹಾರ ಕಂಡುಕೊಳ್ಳಲು ಜಂಟಿ ಸರ್ವೆಗೆ ಅಧಿಕಾರಿಗಳು ಮುಂದಾಗಬೇಕು. ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಕಾಯ್ದೆಯಡಿ ಭೂಮಿ ಮಂಜೂರಾತಿ ಮಾಡಬೇಕು. ಆ ಸಮುದಾಯಗಳ ಹಕ್ಕನ್ನು ಈ ಕಾಯ್ದೆಯಡಿ ಕಲ್ಪಿಸಿಕೊಡಬೇಕು. ಗ್ರಾಮ ಅರಣ್ಯ ಸಮಿತಿಗಳ ಮುಂದೆ ತಿರಸ್ಕøತವಾಗಿರುವ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕೆಂದು ಇದೆ ವೇಳೆ ಅವರು ಆಗ್ರಹಿಸಿದರು..

ಸುದ್ದಿಗೋಷ್ಠಿಯಲ್ಲಿ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಹುಲಿಕೆರೆ ಶಿವಮೂರ್ತಿ, ಜಿಲ್ಲಾ ಸಂಚಾಲಕ ಕೆ.ಜಿ.ಸಂತೋಷ್, ಮೂಡಿಗೆರೆ ತಾಲೂಕು ಸಂಚಾಲಕ ಪೂವಪ್ಪ, ಕಳಸದ ಯೋಗೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News