ಎಸಿಬಿ ಅಧಿಕಾರಿಗಳ ದಾಳಿ: ಲಂಚ ಸ್ವೀಕರಿಸುತ್ತಿದ್ದ ಮೆಸ್ಕಾಂ ಇಂಜಿನಿಯರ್ ಬಂಧನ

Update: 2021-01-28 12:46 GMT

ಶಿವಮೊಗ್ಗ,ಜ28: ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿಗೆ ಟ್ರಾನ್ಸ್‌ಫರ್ಮಾರ್(ಟಿಸಿ) ಆಳವಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ 5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಮೆಸ್ಕಾಂನ ಸಹಾಯಕ ಇಂಜಿನಿಯರ್ ಒಬ್ಬರು ಭ್ರಷ್ಟಾಚಾರ ನಿಗ್ರಹದಳ(ಎಸಿಬಿ)ಬಲೆಗೆ ಬಿದಿದ್ದಾರೆ.
ಮೆಸ್ಕಾಂನ ಹೊಳೆಹೊನ್ನೂರು ಉಪವಿಭಾಗದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್  ಬಿ.ಎಸ್ ಪ್ರಕಾಶ್ ಎಸಿಬಿ ಬಲೆಗೆ ಬಿದ್ದವರು. ಗುರುವಾರ ಮಧ್ಯಾಹ್ನ ಪ್ರಕಾಶ್ ಅವರು  ಐದು ಸಾವಿರ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಲಾಗಿದೆ. ಹೊಳೆಹೊನ್ನೂರು ಉಪವಿಭಾಗ ಕಛೇರಿಯಲ್ಲೆ ದಾಳಿ ನಡೆಸಲಾಗಿದೆ.

ಎಸಿಬಿ ಪೂರ್ವವಲಯ ಎಸ್‌ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಲೋಕೇಶ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಇಮ್ರಾನ್ ಬೇಗ್, ಸಿಬ್ಬಂದಿಗಳಾದ ವಸಂತ್ ಎನ್.ಕೆ,ರಘುನಾಯ್ಕ,ನಾಗರಾಜ್,ಸುರೇಂದ್ರ,ಯೋಗೇಶಪ್ಪ,ಹರೀಶ್,ಶ್ರೀನಿವಾಸ್ ದಾಳಿಯಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News