ಕೇಂದ್ರ ಗೃಹ ಅಮಿತ್ ಶಾ ರಾಜೀನಾಮೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ

Update: 2021-01-28 16:30 GMT

ಬೆಂಗಳೂರು, ಜ. 28: ಗಣರಾಜ್ಯೋತ್ಸವ ಸಂದರ್ಭದಲ್ಲಿ ದಿಲ್ಲಿಯಲ್ಲಿ ರೈತರ ಚಳವಳಿ ವೇಳೆ ನಡೆದ ಗಲಭೆಯನ್ನು ತೀವ್ರವಾಗಿ ಖಂಡಿಸಿರುವ ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಜಾರಿಯಾದ ದಿನ ಇಂತಹ ಅಹಿತಕರ ಘಟನೆ ನಡೆಸಿರುವುದು ದೇಶದ ಶೋಷಿತ ಸಮುದಾಯಗಳಿಗೆ ಮಾಡಿದ ಅಪಮಾನ ಎಂದು ವಿಶ್ಲೇಷಿಸಿದ್ದಾರೆ.

ದಿಲ್ಲಿಯಲ್ಲಿ ಶಾಂತರೀತಿಯಲ್ಲಿ ಎರಡು ತಿಂಗಳ ಕಾಲ ಚಳವಳಿ ನಡೆಸಿದ ರೈತರ ವೇಷದಲ್ಲಿ ಮತಾಂಧ ಶಕ್ತಿಗಳು ದಾಂಧಲೆ ನಡೆಸಿರುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ರೈತರನ್ನು ಉಗ್ರರಂತೆ ಬಿಂಬಿಸುವುದು, ಸುಳ್ಳು ಎಫ್‍ಐಆರ್ ದಾಖಲಿಸಿರುವುದು ಕೇಂದ್ರ ಸರಕಾರ ಕೈವಾಡದ ಸಂಶಯವಿದೆ ಎಂದು ಅವರು ಹೇಳಿದ್ದಾರೆ.

ನಿಯೋಜಿತ ಮಾರ್ಗವನ್ನು ಬದಲಾಯಿಸಿದ ರೈತರನ್ನು ತಡೆಯದೆ ಕೆಂಪುಕೋಟೆಯ ವರೆಗೆ ಹೋಗಲು ಬಿಟ್ಟಿದ್ದು ಏಕೆ? ಅಲ್ಲದೆ, ಮಾರಕಾಸ್ತ್ರಗಳನ್ನು ಹಿಡಿದವರನ್ನು ನಿಯಂತ್ರಿಸದೇ ಕೋಟೆಯ ಒಳಗೆ ನುಸುಳಲು ಬಿಟ್ಟಿದ್ದು ಏಕೆ ಎಂದು ಪ್ರಶ್ನಿಸಿರುವ ಲಕ್ಷ್ಮಿ ನಾರಾಯಣ, ಘಟನೆಯ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಘಟನೆ ಹೊಣೆಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News