×
Ad

ಪೌರಕಾರ್ಮಿಕರು, ದಾದಿಯರು, ಆಶಾಕಾರ್ಯಕರ್ತೆಯರ ಸೇವೆ ಖಾಯಂಗೊಳಿಸುವಂತೆ ದಸಂಸ ಆಗ್ರಹ

Update: 2021-01-28 22:39 IST

ಚಿಕ್ಕಮಗಳೂರು, ಜ.29: ಕೊರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಮಾಡುವ ಮೂಲಕ ಜನರ ಪ್ರಾಣವನ್ನು ಉಳಿಸಿರುವ ದಾದಿಯರು, ಪೌರ ಕಾರ್ಮಿಕರು ಮತ್ತು ಆಶಾ ಕಾರ್ಯಕರ್ತರನ್ನು ಸೇವೆಯಲ್ಲಿ ಖಾಯಂಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಸಮಿತಿಯ ರಾಜ್ಯ ಸದಸ್ಯ ಕೆ.ಸಿ.ವಸಂತಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಗುರುವಾರ ಭೇಟಿ ಮಾಡಿದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿ, ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳು, ಸ್ಥಳೀಯ ಸಂಸ್ಥೆಗಳಲ್ಲಿ ಅನೇಕ ವರ್ಷಗಳಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ದಿನಗೂಲಿ ನೌಕರರಾಗಿ ನರ್ಸ್‍ಗಳು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ನೌಕರರು ಕೊರೋನಾದಂತಹ ಸಂಕಷ್ಟದ ಕಾಲದಲ್ಲೂ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಸರಕಾರದಿಂದ ಯಾವುದೇ ಉದ್ಯೋಗ ಭದ್ರತೆ, ವಿಮಾ ಸೌಲಭ್ಯ ಇಲ್ಲದೇ ಕೆಲಸ ಮಾಡಿರುವ ಇಂತಹ ನೌಕರರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ಈ ನೌಕರರನ್ನು ಖಾಯಂಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ಕೊರೋನ ವ್ಯಾಪಿಸಿದ ದಿನದಿಂದ ದಾದಿಯರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು ಮತ್ತು ಪೋಲೀಸರು ತಮ್ಮ ಪ್ರಾಣದ ಹಂಗನ್ನು ತೊರೆದು, ಮನೆ ಮಠ ಬಿಟ್ಟು ಜನತೆಯ ಸೇವೆ ಮಾಡಿದ್ದಾರೆ, ಅವರ ತ್ಯಾಗದಿಂದಾಗಿ ಸಾರ್ವಜನಿಕರು ಸುರಕ್ಷಿತವಾಗಿ ಬದುಕಿದ್ದಾರೆ. ದಾದಿಯರು, ಪೌರ ಕಾರ್ಮಿಕರು ಮತ್ತು ಆಶಾ ಕಾರ್ಯಕರ್ತರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ರಾಜ್ಯ ಸರಕಾರ 600 ವೈದ್ಯರನ್ನು ಖಾಯಂಗೊಳಿಸಿದ ರೀತಿಯಲ್ಲೇ ಇವರನ್ನೂ ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು. 

ಸಮಿತಿಯ ಪದಾಧಿಕಾರಿಗಳಾದ ಇಲಿಯಾಸ್ ಅಹ್ಮದ್, ಸೋಮಶೇಖರ್, ಮಂಜುನಾಥ್, ಉಮೇಶ್, ರಾಜು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News