ರಾಷ್ಟ್ರಧ್ವಜಕ್ಕೆ ಅಪಮಾನ ಆರೋಪ: ಸಿನಿಮಾ ತಂಡದ ವಿರುದ್ಧ ದೂರು
Update: 2021-01-29 23:06 IST
ಬೆಂಗಳೂರು, ಜ.29: ಚಿತ್ರವೊಂದರ ಟೀಸರ್ ನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಆರೋಪದಡಿ ಮರ್ದಿನಿ ಹೆಸರಿನ ಸಿನಿಮಾ ತಂಡದ ವಿರುದ್ಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಇಂಡಿಯನ್ ಆರ್ಮಿ ಫೋರಂನಿಂದ ದೂರು ಸಲ್ಲಿಕೆ ಮಾಡಿದ್ದು, ಗಣರಾಜ್ಯೋತ್ಸವ ದಿನದಂದು ಟೀಸರ್ ಬಿಡುಗಡೆ ಮಾಡಿತ್ತು. ಇದರಲ್ಲಿ ರಾಷ್ಟ್ರಧ್ವಜದ ಜೊತೆ ಚಿತ್ರದ ನಾಯಕಿ, ಕೈಯಲ್ಲಿ ಪಿಸ್ತೂಲು ಹಿಡಿದು ನಾಯಿಯೊಂದರ ಜೊತೆ ನಿಂತಿದ್ದಾರೆ ಎನ್ನಲಾಗಿದೆ.
ಈ ರೀತಿಯ ಚಿತ್ರವು ನಮ್ಮ ರಾಷ್ಟ್ರೀಯ ಧ್ವಜಕ್ಕೆ ಮಾಡಿದ ಅವಮಾನ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.