×
Ad

ಕಡೂರು: ವಿದ್ಯುತ್ ತಂತಿ ತಗುಲಿ ಓರ್ವ ಮೃತ್ಯು

Update: 2021-01-30 21:58 IST

ಕಡೂರು, ಜ.30: ತಾಲೂಕಿನ ಎಮ್ಮೆದೊಡ್ಡಿ ಸಮೀಪದ ದತ್ತಗಿರಿ ಎಸ್ಟೇಟ್‍ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕೆ.ಎಸ್.ಉಮೇಶ್ (53) ಎಂಬ ಕಾರ್ಮಿಕನಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ಶನಿವಾರ ವರದಿಯಾಗಿದೆ.

ಕಡೂರು ಪಟ್ಟಣದ ಕೋಟೆ ನಿವಾಸಿ ಉಮೇಶ್ ಕಳೆದ 10 ವರ್ಷಗಳಿಂದ ದತ್ತಗಿರಿ ಎಸ್ಟೇಟ್‍ನಲ್ಲಿ ಕೆಲಸ ಮಾಡುತ್ತಿದ್ದು, ಶನಿವಾರ ಬೆಳಗ್ಗೆ ಎಂದಿನಂತೆ ತೋಟದ ಕೆಲಸ ನಿರ್ವಹಿಸಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆಂದು ತಿಳಿದು ಬಂದಿದೆ.

ಈ ವೇಳೆ ಉಮೇಶ್ ಜತೆ ಕೆಲಸ ಮಾಡುತ್ತಿದ್ದ ಬಸವರಾಜು ಎಂಬವರು ಉಮೇಶ್ ಅವರ ಮಗ ಜಗದೀಶ್‍ಗೆ ಕರೆ ಮಾಡಿ ತಿಳಿಸಿದ್ದು, ಅವರು ಸ್ಥಳಕ್ಕೆ ಹೋಗಿ ನೋಡಿದಾಗ ಉಮೇಶ್ ಅವರು ವಿದ್ಯುತ್ ತಗಲಿ ಸ್ಥಳದಲ್ಲೇ ಸಾವನ್ನಪ್ಪಿರುವುದು ತಿಳಿದು ಬಂದಿದೆ. 

ಘಟನೆ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ಪಿಎಸ್ಸೈ ವಿಶ್ವನಾಥ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News