ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿಗೆ ಗಾಲಿ ಜನಾರ್ಧನರೆಡ್ಡಿ ಸನ್ಮಾನ
Update: 2021-01-31 20:07 IST
ಬೆಂಗಳೂರು, ಜ.31: ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಬಳ್ಳಾರಿಯ ಮಂಜಮ್ಮ ಜೋಗತಿ ಅವರಿಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ದಂಪತಿ ಸನ್ಮಾನಿಸಿದ್ದಾರೆ.
ರವಿವಾರ ತಮ್ಮ ನಿವಾಸಕ್ಕೆ ಮಂಜಮ್ಮ ಜೋಗತಿ ಅವರನ್ನು ಕರೆಸಿಕೊಂಡ ಜನಾರ್ದನ ರೆಡ್ಡಿ ಅವರು ಪತ್ನಿ ಅರುಣಾ ಅವರೊಂದಿಗೆ ಸನ್ಮಾನಿಸಿದ್ದಾರೆ.
ಈ ಅವಕಾಶ ದೊರೆತಿರುವುದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ. ವಿಜಯನಗರ ಸಾಮ್ರಾಜ್ಯದ ಗತವೈಭವದ ಸಂಭ್ರಮ ಕಂಡ ಬಳ್ಳಾರಿ ಸೀಮೆ ಅನೇಕ ಮಹಾನ್ ಕಲಾವಿದರು, ಸಾಹಿತಿಗಳು, ಬರಹಗಾರರನ್ನು ಕಂಡ ಪುಣ್ಯ ಭೂಮಿಯಾಗಿದೆ ಎಂದು ರೆಡ್ಡಿ ಸ್ಮರಿಸಿದ್ದಾರೆ.