ಯುಎಪಿಎ ಪ್ರಕರಣದ ತನಿಖೆ ವಿಳಂಬವಾದಲ್ಲಿ ಆರೋಪಿ ಜಾಮೀನಿಗೆ ಅರ್ಹ: ಸುಪ್ರೀಂಕೋರ್ಟ್

Update: 2021-02-02 16:59 GMT

ಹೊಸದಿಲ್ಲಿ,ಫೆ.2: ಕಠಿಣವಾದ ಕಾನೂನುಬಾಹಿರ ಚಟುವಟಿಕೆಗಳ (ತಡೆ)ಕಾಯ್ದೆಯಡಿ ಒಬ್ಬ ವ್ಯಕ್ತಿಯ ವಿರುದ್ಧ ದೋಷಾರೋಪ ಹೊರಿಸಿದಲ್ಲಿ, ಪ್ರಕರಣದ ತ್ವರಿತ ವಿಚಾರಣೆಯು ಆತನ ಮೂಲಭೂತ ಹಕ್ಕಾಗಿದೆ. ಒಂದು ವೇಳೆ ಈ ಮೂಲಭೂತ ಹಕ್ಕಿನ ಉಲ್ಲಂಘನೆಯಾದಲ್ಲಿ ಆತ ಜಾಮೀನಿಗೆ ಅರ್ಹನಾಗುತ್ತಾನೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ಅಭಿಪ್ರಾಯಿಸಿದೆ,

‘‘ ತನಿಖೆಯು ಶೀಘ್ರದಲ್ಲೇ ಪೂರ್ಣಗೊಳ್ಳುವ ಸಾಧ್ಯತೆಯಿರದಿದ್ದಲ್ಲಿ ವಿಚಾರ ಣಾಧೀನ ಕೈದಿಯಾಗಿ ಆರೋಪಿಯು ದೊಡ್ಡ ಗರಿಷ್ಠ ಶಿಕ್ಷೆಯ ದೊಡ್ಡ ಭಾಗವನ್ನು ಪೂರ್ತಿಗೊಳಿಸಿದ್ದಲ್ಲಿ ಕಠೋರವಾದ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ (ಯುಎಪಿಎ)ಯನ್ನು ತಡೆಹಿಡಿಯ ಬೇಕಾಗುತ್ತದೆ ’’ಎಂದು ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಸೂರ್ಯ ಕಾಂತ್ ಹಾಗೂ ಅನಿರುದ್ಧ ಬೋಸ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿತು.

 2010ರಲ್ಲಿ ಪ್ರೊಫೆಸರ್ ಒಬ್ಬರ ಅಂಗೈಯನ್ನು ಕಡಿದುಹಾಕಿದ ಆರೋಪ ಎದುರಿ ಸುತ್ತಿರುವ ವ್ಯಕ್ತಿಗೆ ಜಾಮೀನು ನೀಡುವ ಕೇರಳ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾಸಂಸ್ಥೆಯು ಸಲ್ಲಿಸಿದ್ದ ಅರ್ಜಿಯ ಆಲಿಕೆ ನಡೆಸುತ್ತಿದ್ದ ಸಂದರ್ಭ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

   ನಿಕಟಭವಿಷ್ಯದಲ್ಲಿ ಪ್ರಕರಣದ ವಿಚಾರಣೆಯು ಪೂರ್ಣಗೊಳ್ಳುವ ಸಾಧ್ಯತೆಯಿಲ್ಲ. ಇದ ರಿಂದಾಗಿ ಪ್ರತಿವಾದಿಯು ಐದು ವರ್ಷಗಳಿಗೂ ಹೆಚ್ಚು ಸಮಯ ಜೈಲಿನಲ್ಲಿರಬೇಕಾಯಿತು. ಆದರೆ ಪ್ರಕರಣಕ್ಕೆ ಸಂಬಂಧಿಸಿ 276 ಸಾಕ್ಷಿದಾರರ ವಿಚಾರಣೆ ಇನ್ನೂ ಕೂಡಾ ನಡೆಸದಿರುವ ಬಗ್ಗೆ ನ್ಯಾಯಪೀಠವು ಗಮನಸೆಳೆಯಿತೆಂದು ಬಾರ್ ಆ್ಯಂಡ್ ಬೆಂಚ್ ವರದಿ ಮಾಡಿದೆ. 2010ರ ಜುಲೈ 4ರಂದು ಚರ್ಚ್‌ನಲ್ಲಿ ರವಿವಾರದ ಪ್ರಾರ್ಥನಾಕೂಟ ಮುಗಿಸಿ ವಾಪಾಸಾಗುತ್ತಿದ್ದಾಗ ಏಳು ಮಂದಿಯ ಗುಂಪೊಂದು ಟಿ.ಜೆ.ಜೋಸೆಫ್ ಅವರ ಬಲ ಅಂಗೈಯನ್ನು ಕತ್ತರಿಸಿ ಹಾಕಿತ್ತು.ತೋಡಂಪುಳ ನಗರಸಭೆ ವ್ಯಾಪ್ತಿಯ ನ್ಯೂಮ್ಯಾನ್ ಕಾಲೇಜ್‌ನ ಮಲಯಾಳಂ ವಿಭಾಗವು ನಡೆಸಿದ ಆಂತರಿಕ ಪರೀಕ್ಷೆಗೆ ಥಾಮಸ್ ಸಿದ್ಧಪಡಿಸಿದ ಪ್ರಶ್ನಾಪತ್ರಿಕೆಯಲ್ಲಿ ಪ್ರವಾದಿಯವರ ಅವಹೇಳನ ಮಾಡಲಾಗಿತ್ತೆನ್ನಲಾಗಿದ್ದು, ಅದರ ಬೆನ್ನಲ್ಲೇ ಈ ಘಟನೆ ನಡೆದಿತ್ತು.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಸೆಕ್ಷನ್ 43ಡಿಯ ಕಠಿಣವಾದ ಶಾಸನಗಳನ್ನು ಪರಿಗಣಿಸದೆಯೇ ಆರೋಪಿಗಳಿಗೆ ಕೇರಳ ಹೈಕೋರ್ಟ್ ಜಾಮೀನು ನೀಡಿದೆಯೆಂದು ಆಕ್ಷೇಪಿಸಿ ಎನ್‌ಐಎ, ಆರೋಪಿಗಳಿಗೆ ಜಾಮೀನು ನೀಡಿರುವುದಾಗಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

 ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯ ವಿರುದ್ಧ ಸೆಕ್ಷನ್ 43ಡಿ (5), ಜಾಮೀನು ನೀಡುವುದಕ್ಕೆ ತಡೆಯೊಡ್ಡುತ್ತದೆ ಎಂಬ ಎನ್‌ಐಎ ಪರ ವಕೀಲರ ವಾದವನ್ನು ಸುಪ್ರೀಂಕೋರ್ಟ್ ಒಪ್ಪಿತಾದರೂ, ಮೂಲಭೂತ ಹಕ್ಕುಗಳಿಗೆ ಚ್ಯುತಿಯಾದಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ನ್ಯಾಯಾಲಯಗಳಿಗಿರುವ ಅಧಿಕಾರವನ್ನು ಆ ಕಾನೂನು ನಿರ್ಬಂಧಿಸುವುದಿಲ್ಲವೆಂದು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News