ಆಕರ್ಷಣೆಯ ಕೇಂದ್ರ ಬಿಂದುವಾದ ತೇಜಸ್ ಸಾರಂಗ್, ಸೂರ್ಯ ಕಿರಣ್ ಜಂಟಿ ಪ್ರದರ್ಶನ ಅದ್ಭುತ

Update: 2021-02-03 14:38 GMT

ಬೆಂಗಳೂರು, ಫೆ.3: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. 2016ರಲ್ಲಿ ದೇಶದ ವಾಯು ಸೇನೆಗೆ ಸೇರ್ಪಡೆಯಾದ ತೇಜಸ್ ಯುದ್ಧ ನೌಕೆಯು ನಾಲ್ಕನೆ ತಲೆಮಾರಿನ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಯದ್ಧ ವಿಮಾನ.

ಗ್ರೂಪ್ ಕ್ಯಾಪ್ಟನ್ ಮನೀಶ್ ತೊಲಾನಿ ತೇಜಸ್ ಯುದ್ಧ ನೌಕೆಯ ಪೈಲಟ್ ಆಗಿ ನೀಡಿದ ಸಾಹಸ ಪ್ರದರ್ಶನ ಪ್ರೇಕಕ್ಷರನ್ನು ಮೂಖ ವಿಸ್ಮಿತರನ್ನಾಗಿಸಿತು. ಕ್ಷಣಾರ್ಧದಲ್ಲೆ ಮುಗಿಲೆತ್ತರಕ್ಕೆ ಚಿಮ್ಮುವ ತೇಜಸ್ ಸರಾಸರಿ 300 ಕಿ.ಮೀ. ಪ್ರತಿ ಗಂಟೆಗೆ ಚಲಿಸಿದ್ದು, ಆಕಾಶದಲ್ಲಿ ತಲೆ ಕೆಳಗಾಗಿ, ಎಡಕ್ಕೆ ಹಾಗೂ ಬಲಕ್ಕೆ ತಲಾ ನಾಲ್ಕು ಬಾರಿ ಪಲ್ಲಟಗೊಂಡು ಶರವೇಗದಲ್ಲಿ ಚಲಿಸುವ ಸಾಹಸಕ್ಕೆ ಪ್ರೇಕ್ಷಕರೆಲ್ಲರೂ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಸೂರ್ಯ ಕಿರಣ್ ಯುದ್ಧ ನೌಕೆ ಹಾಗೂ ಸಾರಂಗ್ ಹೆಲಿಕಾಪ್ಟರ್‍ಗಳು ಶತ್ರುಗಳ ದಿಕ್ಕು ತಪ್ಪಿಸಲು ನಡೆಸುವ ಜಂಟಿ ಸಾಹಸವಂತು ಅದ್ಧುತ ಅನುಭವ. ಬಾನಂಗಳದಲ್ಲಿ ಸೂರ್ಯ ಕಿರಣ್ ಯುದ್ಧ ನೌಕೆಗಳು ಆರ್ಭಟಿಸುವ ಸಾಹಸ ಪ್ರದರ್ಶನ ಗಮನ ಸೆಳೆಯಿತು. ಅಲ್ಲದೆ, ಎರಡು ಸೂರ್ಯ ಕಿರಣ್ ಯುದ್ಧ ನೌಕೆಗಳು ಹೃದಯ ಚಿತ್ತಾರವನ್ನು ಮೂಡಿಸಿದವು. ಸಾರಂಗ್ ಹೆಲಿಕಾಪ್ಟರ್‍ಗಳ ನರ್ತನಕ್ಕೆ ಸಭಿಕರ ಚಪ್ಪಾಳೆ ಮುಗಿಲು ಮುಟ್ಟಿತ್ತು.

ಇದಲ್ಲದೆ, ತೇಜಸ್ ಯುದ್ಧ ವಿಮಾನದ ಮಂದಾಳತ್ವದಲ್ಲಿ ಐದು ವಿಮಾನಗಳು, ರ್ಯಾಡಾರ್ ಹೊತ್ತಿದ್ದ ವಿಮಾನ ನೇತ್ರಾ, ಡಸಾಲ್ಟ್ ಏವಿಯೇಷನ್‍ನ ಮೂರು ರಫೇಲ್ ಯುದ್ಧ ವಿಮಾನಗಳು, ಜಾಗ್ವಾರ್, ಹಾಕ್, ತ್ರಿಶೂಲ್, ರುದ್ರ ವಿಮಾನಗಳು ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News