ಹನೂರು: ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ
Update: 2021-02-04 12:44 IST
ಹನೂರು, ಫೆ.4: ತಾಯಿ ಹಾಗೂ ಮಗ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಚಿನಮ್ಮ (39) ಹಾಗೂ ಆಕೆಯ ಪುತ್ರ ಮಹದೇವಸ್ವಾಮಿ(14) ಆತ್ಮಹತ್ಯೆ ಮಾಡಿಕೊಂಡವರು.
ಕಾಡಂಚಿನ ಗ್ರಾಮ ಹೂಗ್ಯಂ ಗ್ರಾಮದಲ್ಲಿ ವಾಸವಾಗಿದ್ದ ಚಿನಮ್ಮ ಕೌಟಂಬಿಕ ಕಲಹದಿಂದ ಬೇಸತ್ತು ಮಗನ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ರಾಮಾಪುರ ಪೊಲೀಸ್ ಸಿಬ್ಬಂದಿಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.