×
Ad

ಕೆಪಿಟಿಸಿಎಲ್ ನೇಮಕಾತಿ ರದ್ದು ಆದೇಶ ಹಿಂಪಡೆಯಲು ಸೌಮ್ಯಾರೆಡ್ಡಿ ಆಗ್ರಹ

Update: 2021-02-04 18:15 IST

ಬೆಂಗಳೂರು, ಫೆ.4: ಕೆಪಿಟಿಸಿಎಲ್ ವಿವಿಧ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ರದ್ದತಿ ಮಾಡುವ ಆದೇಶವನ್ನು ಈ ಕೂಡಲೇ ರಾಜ್ಯ ಸರಕಾರ ಹಿಂಪಡೆಯಬೇಕೆಂದು ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕೆಪಿಟಿಸಿಎಲ್ ವಿವಿಧ ಹುದ್ದೆಗಳ ನೇರ ನೇಮಕಾತಿ ರದ್ದತಿ ಆದೇಶವನ್ನು ಸರಕಾರ ಈ ಕೂಡಲೇ ಹಿಂಪಡೆದುಕೊಂಡು ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯ ಸರಕಾರ ಕಳೆದ 1 ವರ್ಷದಿಂದ ಎಇ, ಜೆಇ, ಜೆಎ ಹುದ್ದೆಗಳನ್ನು ಕೆಪಿಟಿಸಿಎಲ್, ಎಸ್ಕಾಂಗಳಲ್ಲಿ ಆಡಳಿತಾತ್ಮಕ ಕಾರಣಗಳನ್ನು ನೀಡಿ ರದ್ದುಗೊಳಿಸಿದೆ. ಇದರಿಂದ ಸುಮಾರು 2 ಲಕ್ಷ ಅಭ್ಯರ್ಥಿಗಳು ಈಗಾಗಲೇ ತಯಾರಿ ನಡೆಸಿ ಕನ್ನಡ ಭಾಷಾ ಪರೀಕ್ಷೆಯನ್ನು ಬರೆದಾಗಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷಾ ತಯಾರಿಗಾಗಿ ಅಭ್ಯರ್ಥಿಗಳು ವ್ಯಯಿಸಿದ ಹಣ, ಸಮಯ ಮತ್ತು ಪರಿಶ್ರಮಕ್ಕೆ ಬೆಲೆ ನೀಡದೆ ಹಠಾತ್ ಎಲ್ಲ ಹುದ್ದೆಗಳನ್ನು ರದ್ದುಗೊಳಿಸಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ಅನೇಕ ಅಭ್ಯರ್ಥಿಗಳು ಈ ಕುರಿತು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದು, ರಾಜ್ಯ ಸರಕಾರ ಈ ಬಗ್ಗೆ ಗಮನ ಹರಿಸುವಂತೆ ಅವರು ಪತ್ರದಲ್ಲಿ ಒತ್ತಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News